DCM DK Shivakumar: ವಿಧಾನಸೌಧ ಮೆಟ್ಟಿಲಿಗೆ ಶಿರ ಸ್ವರ್ಶಿಸಿ ಒಳ ಹೋದ ಡಿಕೆ ಶಿವಕುಮಾರ್
CM ಆಗಿ ಸಿದ್ದರಾಮಯ್ಯ, DCM ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ವೇಳೆ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ಡಿಸಿಎಂ ಆಗಿ ವಿಧಾನಸೌಧಕ್ಕೆ ಬಂದ ಡಿಕೆಶಿ, ವಿಧಾನಸೌಧ ಮೆಟ್ಟಿಲುಗೆ ತಲೆಬಾಗಿ ನಮಿಸಿದ್ರು..
ಕರ್ನಾಟಕ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು ಸಿಎಂ ಡಿಸಿಎಂ ಆಗಿ ಮೊದಲ ಬಾರಿಗೆ ವಿಧಾನಸೌಧಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ವಿಧಾನಸೌಧದ ಮೆಟ್ಟಿಲಿಗೆ ಶಿರ ಬಾಗಿ ನಮಸ್ಕರಿಸಿ ವಿಧಾನಸೌಧದ ಒಳಗೆ ಹೋದರು. ಒಳಗೆ ಹೋಗುವ ವೇಳೆ ಮಾಧ್ಯಮಗಳಿಗೆ ಥಮ್ಸ್ ಅಪ್ ಹಾಗೂ ವಿಕ್ಟರಿ ಸಿಂಬಲ್ ತೋರಿಸಿದರು.