ಶಾಸಕ ಮುನಿರತ್ನಗೂ ರೇಣುಕಾ ಸ್ವಾಮಿ ಕೊಲೆಗೂ ಲಿಂಕ್?

Updated on: Sep 14, 2024 | 6:52 PM

BJP MLA Munirathna: ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಆತನ ಹೆಸರು ರೇಣುಕಾ ಸ್ವಾಮಿ ಪ್ರಕರಣದಲ್ಲಿಯೂ ಕೇಳಿ ಬರುತ್ತಿದೆ.

ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆದರೆ ಇದೀಗ ಮುನಿರತ್ನ ಹಾಗೂ ರೇಣುಕಾ ಸ್ವಾಮಿ ಕೊಲೆಗೂ ಲಿಂಕ್ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಮುನಿರತ್ನ, ಬೆದರಿಕೆ ಹಾಕಿದ್ದ ಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಕಡೆಯವನು ಬೆದರಿಕೆ ಹಾಕುತ್ತಾ, ರೇಣುಕಾ ಸ್ವಾಮಿಯನ್ನು ಕೊಂದಿದ್ದ ಮುನಿರತ್ನ ತಂಗಿ ಮಗ ಎಂದಿದ್ದಾನಂತೆ, ನಿನ್ನನ್ನೂ ಹಾಗೆ ಕೊಲ್ಲುತ್ತಾರೆ ಎಂದು ಬೆದರಿಸಿದ್ದನಂತೆ. ಇಂದು ಮುನಿರತ್ನ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಡಿಕೆ ಸುರೇಶ್, ರೇಣುಕಾ ಸ್ವಾಮಿ ಕೊಲೆಗೂ ಮುನಿರತ್ನಗೂ ಸಂಬಂಧ ಇರುವ ಸಾಧ್ಯತೆ ಇದೆ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us