‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಇದರ ಅರ್ಥವೇನು ಗೊತ್ತಾ?

Updated on: Sep 20, 2025 | 6:54 AM

ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಶ್ಲೋಕದ ಅರ್ಥವನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಈ ಶ್ಲೋಕದ ಮೂಲ ಶ್ರೀರಾಮಚಂದ್ರರಾಗಿದ್ದು, ಲಕ್ಷ್ಮಣನ ಮಾತಿಗೆ ಪ್ರತಿಕ್ರಿಯೆಯಾಗಿ ಹೇಳಿದ ಮಾತು ಎಂದು ತಿಳಿದುಬರುತ್ತದೆ. ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಶ್ರೇಷ್ಠ ಎಂಬ ಈ ಶ್ಲೋಕದ ತಾತ್ವಿಕ ಅರ್ಥವನ್ನು ನೀಡುತ್ತದೆ.

ಬೆಂಗಳೂರು, ಸೆಪ್ಟೆಂಬರ್​ 20: “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಪ್ರಸಿದ್ಧ ಶ್ಲೋಕದ ಅರ್ಥ ಮತ್ತು ಮಹತ್ವವನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಈ ಶ್ಲೋಕವು ತಾಯಿ ಮತ್ತು ತಾಯ್ನಾಡಿನ ಮಹತ್ವವನ್ನು ಒತ್ತಿಹೇಳುತ್ತದೆ. ಶ್ರೀರಾಮಾಯಣದಲ್ಲಿ, ಲಂಕೆಯ ಐಶ್ವರ್ಯವನ್ನು ಕಂಡು ಮಂತ್ರಮುಗ್ಧನಾದ ಲಕ್ಷ್ಮಣ, ಅಯೋಧ್ಯೆಗಿಂತ ಲಂಕೆ ಉತ್ತಮ ಎಂದು ಶ್ರೀರಾಮರಿಗೆ ಹೇಳಿದಾಗ, ಶ್ರೀರಾಮ ಈ ಶ್ಲೋಕವನ್ನು ಉಚ್ಚರಿಸಿದ. ಸ್ವರ್ಗದ ಎಲ್ಲಾ ಐಶ್ವರ್ಯಗಳಿಗಿಂತ ತಾಯಿ ಮತ್ತು ತಾಯ್ನಾಡು ಶ್ರೇಷ್ಠ ಎಂಬುವುದು ಇದರ ಅರ್ಥ.