
[lazy-load-videos-and-sticky-control id=”pp8QQEYZ_cU”]
ದಾವಣಗೆರೆ: IAS ಅಧಿಕಾರಿಗಳು ನೀಡಿದ ಕಿರುಕುಳದಿಂದಾಗಿ ನೌಕರಿ ಬಿಟ್ಟು ಆಟೋ ಓಡಿಸುತ್ತಿರುವ ಮಾಜಿ ವೈದ್ಯಾಧಿಕಾರಿ ಡಾ.ರವೀಂದ್ರನಾಥ್ರಿಗೆ ಫೋನ್ ಮಾಡಿ ತಮ್ಮನ್ನು ಭೇಟಿ ಮಾಡುವಂತೆ ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ.
IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ ಎಂದು ತಮ್ಮ ಆಟೋದ ಮೇಲೆ ಬರೆಸಿಕೊಂಡಿರುವ ಡಾ. ರವೀಂದ್ರನಾಥ್ ಜೀವನೋಪಾಯಕ್ಕಾಗಿ ಸದ್ಯ ಆಟೋ ಚಾಲಕನಾಗಿದ್ದಾರೆ. ಜೊತೆಗೆ, ರಾಜ್ಯದ ನಾಲ್ಕು ಜನ ಪ್ರಭಾವಿ IAS ಅಧಿಕಾರಿಗಳ ವಿರುದ್ಧ ಆರೋಪ ಸಹ ಮಾಡಿದ್ದಾರೆ. ಹೀಗಾಗಿ, ವೈದ್ಯನ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾದ ಆರೋಗ್ಯ ಸಚಿವ ಶ್ರೀರಾಮುಲು ಡಾ. ರವೀಂದ್ರನಾಥ್ಗೆ ಕರೆಮಾಡಿ, ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಇಂದು ತಮ್ಮನ್ನು ಭೇಟಿ ಮಾಡುವಂತೆ ಸೂಚನೆ ನೀಡಿದ್ದಾರೆ.
Published On - 12:26 pm, Sun, 6 September 20