ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭ.. ಆದರೆ?

ಪ್ರಯಾಣಿಕರ ಗಮನಕ್ಕೆ: ನಾಳೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭ.. ಆದರೆ?

[lazy-load-videos-and-sticky-control id=”vJPcMlzM0Ok”]

ಬೆಂಗಳೂರು: ಕೊರೊನಾದಿಂದಾಗಿ ನಿಂತಿದ್ದ ‘ನಮ್ಮ ಮೆಟ್ರೋ’ ರೈಲು ಸಂಚಾರ 5 ತಿಂಗಳ ಬಳಿಕ ನಾಳೆಯಿಂದ ಪುನಾರಂಭಗೊಳ್ಳಲಿದೆ. ಮಾರ್ಚ್ 22ರಿಂದ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ, ಸೆಪ್ಟೆಂಬರ್​ 7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ.

ಬೆಳಗ್ಗೆ 8ರಿಂದ 11ರವರೆಗೆ ಹಾಗೂ ಸಂಜೆ 4:30ರಿಂದ 7:30ರವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಶುರುವಾಗಲಿದೆ. ಬಳಿಕ, ಸೆಪ್ಟೆಂಬರ್ 9ರಿಂದ 10ರವರೆಗೆ ಹಸಿರು ಮಾರ್ಗದಲ್ಲಿ ಬೆಳಗ್ಗೆ 8ರಿಂದ 11ರವರೆಗೆ, ಸಂಜೆ 4:30ರಿಂದ 7:30ರವರೆಗೆ ಸಂಚಾರ ನಡೆಸಲಿದೆ. ಸೆಪ್ಟೆಂಬರ್ 11ರಿಂದ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಸಂಚಾರ ಆರಂಭವಾಗುತ್ತದೆ. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೋ ರೈಲು ಸಂಚರಿಸಲಿವೆ ಎಂದು BMRCL​ ಸೂಚಿಸಿದೆ.

ಪ್ರಯಾಣಿಕರಿಗೆ BMRCL ನಿಂದ ಸೂಚನೆಗಳು: 1. ಸ್ಮಾರ್ಟ್​ಕಾರ್ಡ್​ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ 2. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್​ ಸ್ಕ್ರೀನಿಂಗ್​ ಕಡ್ಡಾಯ 3. 2 ಮೀಟರ್​ ದೈಹಿಕ ಅಂತರ ಕಾಯ್ದುಕೊಳ್ಳಬೇಕೆಂದು ಸೂಚನೆ 4. ಪ್ರತಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ 5. ಮೆಟ್ರೋದಲ್ಲಿ ಗುರುತಿಸಿದ ಆಸನದಲ್ಲಿ ಮಾತ್ರ ಕುಳಿತುಕೊಳ್ಳಬೇಕು 6. ಸೂಚಿಸಿದ ಸ್ಥಳದಲ್ಲಿ ಮಾತ್ರ ನಿಂತು ಪ್ರಯಾಣಿಸಬೇಕು 7. 10 ವರ್ಷಕ್ಕಿಂತ ಕಡಿಮೆ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ಅಗತ್ಯವಿದ್ದರೆ ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ

Published On - 2:24 pm, Sun, 6 September 20

Click on your DTH Provider to Add TV9 Kannada