IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ -ಜಿಲ್ಲಾ ಲಸಿಕಾಧಿಕಾರಿ ಆದ್ರು ಆಟೋ ಚಾಲಕ
[lazy-load-videos-and-sticky-control id=”pp8QQEYZ_cU”] ದಾವಣಗೆರೆ: IAS ಅಧಿಕಾರಿಗಳು ನೀಡಿದ ಕಿರುಕುಳದಿಂದಾಗಿ ನೌಕರಿ ಬಿಟ್ಟು ಆಟೋ ಓಡಿಸುತ್ತಿರುವ ಮಾಜಿ ವೈದ್ಯಾಧಿಕಾರಿ ಡಾ.ರವೀಂದ್ರನಾಥ್ರಿಗೆ ಫೋನ್ ಮಾಡಿ ತಮ್ಮನ್ನು ಭೇಟಿ ಮಾಡುವಂತೆ ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ. ಮೂಲತಃ ಜಿಲ್ಲೆಯ ಬಾಡ ಗ್ರಾಮದ ನಿವಾಸಿಯಾಗಿರುವ ಡಾ. ರವೀಂದ್ರನಾಥ್, ಬಳ್ಳಾರಿಯಲ್ಲಿ ಜಿಲ್ಲಾ ಲಸಿಕಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ IAS ಅಧಿಕಾರಿಗಳ ದುರಾಡಳಿತದಿಂದ ಬೇಸತ್ತ ಡಾ. ರವೀಂದ್ರನಾಥ್ ತಮ್ಮ ಉದ್ಯೋಗ ತ್ಯಜಿಸಿದರು. IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ ಎಂದು ತಮ್ಮ ಆಟೋದ […]

[lazy-load-videos-and-sticky-control id=”pp8QQEYZ_cU”]
ದಾವಣಗೆರೆ: IAS ಅಧಿಕಾರಿಗಳು ನೀಡಿದ ಕಿರುಕುಳದಿಂದಾಗಿ ನೌಕರಿ ಬಿಟ್ಟು ಆಟೋ ಓಡಿಸುತ್ತಿರುವ ಮಾಜಿ ವೈದ್ಯಾಧಿಕಾರಿ ಡಾ.ರವೀಂದ್ರನಾಥ್ರಿಗೆ ಫೋನ್ ಮಾಡಿ ತಮ್ಮನ್ನು ಭೇಟಿ ಮಾಡುವಂತೆ ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ.
ಮೂಲತಃ ಜಿಲ್ಲೆಯ ಬಾಡ ಗ್ರಾಮದ ನಿವಾಸಿಯಾಗಿರುವ ಡಾ. ರವೀಂದ್ರನಾಥ್, ಬಳ್ಳಾರಿಯಲ್ಲಿ ಜಿಲ್ಲಾ ಲಸಿಕಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ IAS ಅಧಿಕಾರಿಗಳ ದುರಾಡಳಿತದಿಂದ ಬೇಸತ್ತ ಡಾ. ರವೀಂದ್ರನಾಥ್ ತಮ್ಮ ಉದ್ಯೋಗ ತ್ಯಜಿಸಿದರು.
IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ ಎಂದು ತಮ್ಮ ಆಟೋದ ಮೇಲೆ ಬರೆಸಿಕೊಂಡಿರುವ ಡಾ. ರವೀಂದ್ರನಾಥ್ ಜೀವನೋಪಾಯಕ್ಕಾಗಿ ಸದ್ಯ ಆಟೋ ಚಾಲಕನಾಗಿದ್ದಾರೆ. ಜೊತೆಗೆ, ರಾಜ್ಯದ ನಾಲ್ಕು ಜನ ಪ್ರಭಾವಿ IAS ಅಧಿಕಾರಿಗಳ ವಿರುದ್ಧ ಆರೋಪ ಸಹ ಮಾಡಿದ್ದಾರೆ. ಹೀಗಾಗಿ, ವೈದ್ಯನ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾದ ಆರೋಗ್ಯ ಸಚಿವ ಶ್ರೀರಾಮುಲು ಡಾ. ರವೀಂದ್ರನಾಥ್ಗೆ ಕರೆಮಾಡಿ, ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಇಂದು ತಮ್ಮನ್ನು ಭೇಟಿ ಮಾಡುವಂತೆ ಸೂಚನೆ ನೀಡಿದ್ದಾರೆ.
Published On - 12:26 pm, Sun, 6 September 20




