‘ನಿಮ್ಮದು ಫ್ರಾಡ್ ಬಿಸ್ನೆಸಾ’; ಡಾಗ್ ಸತೀಶ್​ಗೆ ನೇರವಾಗಿ ಕೇಳಿದ ಸುದೀಪ್

Updated on: Sep 28, 2025 | 7:21 PM

ಡಾಗ್ ಸತೀಶ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ಅವರು ತಮ್ಮ ಇತಿಹಾಸ ಹೇಳಿಕೊಂಡಿದ್ದಾರೆ. ಅವರು ಸೆಲೆಬ್ರಿಟಿ ಡಾಗ್ ಬ್ರೀಡರ್ ಆಗಿ ಅವರು ಫೇಮಸ್ ಆಗಿದ್ದಾರೆ. ಅವರು ತಮ್ಮ ಇತಿಹಾಸ ಹೇಳಿಕೊಂಡಿದ್ದಾರೆ .

ಡಾಗ್ ಸತೀಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಶ್ವಾನಗಳ ತಳಿ ಮೂಲಕ ಸತೀಶ್ ಫೇಮಸ್ ಆಗಿದ್ದಾರೆ. ಅವರು ವಿವಾದದ ಮೂಲಕವೂ ಸುದ್ದಿ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ವೇದಿಕೆ ಮೇಲೆ ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ. ‘ಕೆಲವು ಕಾರಣಕ್ಕೆ ನಾನು ಪತ್ನಿಯಿಂದ ದೂರ ಇದ್ದೇನೆ, ಮಗನಿಗಾಗಿ ಮತ್ತೆ ಮದುವೆ ಆಗಿಲ್ಲ’ ಎಂದು ಡಾಗ್ ಸತೀಶ್ ಹೇಳಿದ್ದಾರೆ.

ಆ ಬಳಿಕ ಡಾಗ್ ಸತೀಶ್ ಅವರು ಒಂದು ವಿಚಾರ ರಿವೀಲ್ ಮಾಡಿದರು. ‘ಶ್ವಾನಕ್ಕೆ ಬೆಲೆ ಎಂಬುದು ಇರೋದಿಲ್ಲ. ಅದನ್ನು ತೆಗೆದುಕೊಳ್ಳುವವರು ಯಾವ ಕಾರಲ್ಲಿ ಬರುತ್ತಾರೆ ಎಂಬುದರ ಮೇಲೆ ಬೆಲೆ ನಿಗದಿ ಆಗುತ್ತದೆ’ ಎಂದು ಸತೀಶ್ ಹೇಳಿದರು. ‘ನಿಮ್ಮದು ಫ್ರಾಡ್ ಬಿಸ್ನೆಸಾ’ ಎಂದು ಸುದೀಪ್ ನೇರವಾಗಿ ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.