ಸತತವಾಗಿ 36 ಗಂಟೆ ಹನುಮಾನ್ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ನಾಯಿ!

Updated on: Jan 14, 2026 | 9:21 PM

ಉತ್ತರ ಪ್ರದೇಶದ ಬಿಜ್ನೋರ್‌ನ ನಗೀನಾದಲ್ಲಿ ಅಚ್ಚರಿಯ ಗಂಟೆಯೊಂದು ನಡೆದಿದೆ. 36 ಗಂಟೆಗಳ ಕಾಲ ನಾಯಿಯೊಂದು ಹನುಮಾನ್ ವಿಗ್ರಹವನ್ನು ಸುತ್ತುತ್ತಿದೆ. ಈ 'ಪವಾಡ' ದೃಶ್ಯವನ್ನು ವೀಕ್ಷಿಸಲು ಭಕ್ತರ ದೊಡ್ಡ ಗುಂಪು ಸೇರಿದೆ. ನಿರಂತರವಾಗಿ ಹನುಮಾನ್​ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಲೇ ಇದ್ದ ಆ ನಾಯಿಯನ್ನು ನೋಡಲು ಜನರು ಸಾಲಗಟ್ಟಿ ನಿಂತಿದ್ದರು. ಈ ದೃಶ್ಯವನ್ನು ಜನರು ಪವಾಡ ಎಂದು ಕರೆದಿದ್ದಾರೆ. ಉತ್ತರ ಪ್ರದೇಶದ ಬಿಜ್ನೋದಲ್ಲಿ ಕೊರೆಯುವ ಚಳಿಯಲ್ಲೂ ನಾಯಿ 36 ಗಂಟೆ ಪ್ರದಕ್ಷಿಣೆ ಹಾಕುತ್ತಲೇ ಇತ್ತು.

ನವದೆಹಲಿ, ಜನವರಿ 14: ದೇವಸ್ಥಾನದ ಬಳಿ ಒಂದು ನಾಯಿ ಹನುಮಾನ್ ದೇವರ ವಿಗ್ರಹದ ಸುತ್ತ 36 ಗಂಟೆಗಳ ಕಾಲ ಸುತ್ತುತ್ತಲೇ ಇತ್ತು. ನಿರಂತರವಾಗಿ ಹನುಮಾನ್​ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಲೇ ಇದ್ದ ಆ ನಾಯಿಯನ್ನು ನೋಡಲು ಜನರು ಸಾಲಗಟ್ಟಿ ನಿಂತಿದ್ದರು. ಈ ದೃಶ್ಯವನ್ನು ಜನರು ಪವಾಡ ಎಂದು ಕರೆದಿದ್ದಾರೆ. ಉತ್ತರ ಪ್ರದೇಶದ ಬಿಜ್ನೋದಲ್ಲಿ ಕೊರೆಯುವ ಚಳಿಯಲ್ಲೂ ನಾಯಿ 36 ಗಂಟೆ ಪ್ರದಕ್ಷಿಣೆ ಹಾಕುತ್ತಲೇ ಇತ್ತು. ಕೆಲವರು ಆ ನಾಯಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದು ಕಳವಳ ವ್ಯಕ್ತಪಡಿಸಿ ಕಮೆಂಟ್ ಹಾಕುತ್ತಿದ್ದರೆ ಇನ್ನು ಕೆಲವರು ಆ ನಾಯಿಗೆ ಹನುಮಾನ್ ಆಶೀರ್ವಾದವಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ವಿಡಿಯೋ ಸಾಕಷ್ಟು ವೈರಲ್ (Viral Video) ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ