ಕುಟುಂಬದೊಂದಿಗೆ ಗಾಳಿಪಟ ಹಾರಿಸಿದ ಗೃಹ ಸಚಿವ ಅಮಿತ್ ಶಾ
ಗುಜರಾತ್‌ನಲ್ಲಿ ಉತ್ತರಾಯಣ ಆಚರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಕುಟುಂಬದೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದರು. ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಕುಟುಂಬ ಮತ್ತು ನರನ್‌ಪುರ ಪ್ರದೇಶದ ನಿವಾಸಿಗಳೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದರು. ಉತ್ತರ ಭಾರತದಲ್ಲಿ ಸಂಕ್ರಾಂತಿಯ ವೇಳೆ ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಹಾಗೇ, ಇಂದು ಬೆಳಗ್ಗೆ ಅಮಿತ್ ಶಾ ಜಮಾಲ್‌ಪುರ ಪ್ರದೇಶದ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಅಹಮದಾಬಾದ್, ಜನವರಿ 14: ಗುಜರಾತ್‌ನಲ್ಲಿ ‘ಉತ್ತರಾಯಣ’ ಎಂದೂ ಕರೆಯಲ್ಪಡುವ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಕುಟುಂಬ ಮತ್ತು ನರನ್‌ಪುರ ಪ್ರದೇಶದ ನಿವಾಸಿಗಳೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದರು. ಉತ್ತರ ಭಾರತದಲ್ಲಿ ಸಂಕ್ರಾಂತಿಯ ವೇಳೆ ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಹಾಗೇ, ಇಂದು ಬೆಳಗ್ಗೆ ಅಮಿತ್ ಶಾ ಜಮಾಲ್‌ಪುರ ಪ್ರದೇಶದ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

