Donald Trump Swearing-in Ceremony Live: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನದ ನೇರಪ್ರಸಾರ
Donald Trump Oath Taking Live: We Make America Safe Again.. We Make America Great Again.. ಶಪಥ.. ಇದು ಟ್ರಂಪ್ ಮಾಡಿರೋ ಶಪಥ.. ಎಲೆಕ್ಷನ್ ವಿಕ್ಟರಿ ಭಾಷಣದಲ್ಲಿ ಅಬ್ಬರಿಸಿದ್ದ ಟ್ರಂಪ್, ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸೋ ಮಾತಗಳನ್ನೂ ಆಡಿದ್ರು. ಟ್ರಂಪ್ ಮಾಡಿದ್ದ ಶಪಥ, ಟ್ರಂಪ್ ನೀಡಿದ್ದ ಭರವಸೆ ಈಡೇರೋ ಕಾಲ ಬಂದಿದೆ. ಇಂದಿನಿಂದ ಅಮೆರಿಕದಲ್ಲಿ ಟ್ರಂಪ್ ಯುಗ ಆರಂಭವಾಗುತ್ತಿದೆ. 47ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿರುವ ನೇರಪ್ರಸಾರ ಇಲ್ಲಿದೆ.
ವಾಷಿಂಗ್ಟನ್, (ಜನವರಿ 20): ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದು, ಇಂದಿನಿಂದ ಅಮೆರಿಕದಲ್ಲಿ ಟ್ರಂಪ್ ಯುಗ ಆರಂಭವಾಗಲಿದೆ. ಪ್ರಮಾಣವಚನ ಸಮಾರಂಭಕ್ಕೆ ಕೊನೆ ಹಂತದ ಸಿದ್ದತೆಗಳು ಪೂರ್ಣಗೊಂಡಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ಗಣ್ಯರು ಜಮಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಭವನ ಕ್ಯಾಪಿಟಲ್ ಹೌಸ್‌ನಲ್ಲಿ ಪ್ರಮಾಣವಚನ ನಡೆಯುತ್ತಿದ್ದು, ಅತಿಯಾದ ಚಳಿ ಇರೋ ಕಾರಣ 40 ವರ್ಷದ ಬಳಿಕ ಒಳಾಂಗಣ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭವನದ ಆವರಣದಲ್ಲಿ ಬೃಹತ್ ಎಲ್‌ಇಡಿ ಅಳವಡಿಸಲಾಗಿದೆ. ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಗಣ್ಯರು ಭಾಗಿಯಾದ್ದು, ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಭಾಗಿಯಾಗಿದ್ದಾರೆ. ಇನ್ನು ಭಾರತದ ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಸಹ ಈ ಟ್ರಂಪ್ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮದ ನೇರಪ್ರಸಾರ ಇಲ್ಲಿದೆ ನೋಡಿ.