ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಕಿರುತೆರೆ ನಟಿ ಗೌತಮಿ ಜಾದವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಿಂದ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಪ್ರಶ್ನೆ ಕೇಳಿಬರುವುದು ಸಹಜ. ಸೀರಿಯಲ್ಗಳಲ್ಲಿ ಬೇಡಿಕೆ ಹೊಂದಿದ್ದ ಅವರು 3 ತಿಂಗಳಿಗೂ ಹೆಚ್ಚು ಸಮಯವನ್ನು ಬಿಗ್ ಬಾಸ್ ಆಟಕ್ಕಾಗಿ ನೀಡಿದ್ದರು. ಆದರೆ ಫಿನಾಲೆ ತಲುಪಲು ಅವರಿಗೆ ಸಾಧ್ಯವಾಗಿಲ್ಲ.
ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗ ‘ಎಷ್ಟು ಸಂಭಾವನೆ ಸಿಕ್ಕಿತು’ ಎಂಬ ಪ್ರಶ್ನೆ ಎದುರಾಗುತ್ತಿದೆ. ಗೌತಮಿ ಜಾದವ್ ಅವರಿಗೂ ಇದೇ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ನಿಖರವಾದ ನಂಬರ್ ಹೇಳಿಲ್ಲ. ‘ಪ್ರೀತಿಯಿಂದ ಎಷ್ಟು ಕೊಟ್ಟಿದ್ದಾರೋ ಅಷ್ಟು ತಗೊಂಡಿದ್ದೀನಿ’ ಎಂದು ಗೌತಮಿ ಜಾದವ್ ಹೇಳಿದ್ದಾರೆ. ಗೌತಮಿ ಬಳಿಕ ಎಲಿಮಿನೇಟ್ ಆದ ಧನರಾಜ್ ಆಚಾರ್ ಕೂಡ ಸಂಭಾವನೆ ಬಗ್ಗೆ ಬಾಯಿ ಬಿಟ್ಟಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos