ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ನಟಿ ಮೋಕ್ಷಿತಾ ಪೈ ಅವರ ಒಂದು ಹಳೇ ಕೇಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗಿದೆ. ಆ ಬಗ್ಗೆ ಗೌತಮಿ ಜಾದವ್ ಅವರು ಮಾತನಾಡಿದ್ದಾರೆ. ಕಳೆದ ಶನಿವಾರ (ಜನವರಿ 18) ಗೌತಮಿ ಅವರು ಬಿಗ್ ಬಾಸ್ ಆಟದಿಂದ ಔಟ್ ಆದರು. ಎಲಿಮಿನೇಷನ್ ನಂತರ ‘ಟಿವಿ9’ಗೆ ಅವರು ಸಂದರ್ಶನ ನೀಡಿದ್ದಾರೆ.
ಬಿಗ್ ಬಾಸ್ಗೆ ಬರುವುದಕ್ಕೂ ಮುನ್ನ ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಪರಿಚಿತರಾಗಿದ್ದರು. ಆದರೆ ಮೋಕ್ಷಿತಾ ಬಗೆಗಿನ ಎಲ್ಲ ವಿಚಾರಗಳು ಗೌತಮಿಗೆ ತಿಳಿದಿರಲಿಲ್ಲ. ‘ನನಗೆ ಆ ಕೇಸ್ ಬಗ್ಗೆ ಗೊತ್ತಿಲ್ಲ. ಆ ಕುರಿತು ಕೇಳಿದಾಗ ಆಶ್ಚರ್ಯ ಆಯಿತು. ಅವರ ಹೆಸರು ಕೂಡ ಬೇರೆ ಇತ್ತು ಎಂಬುದು ತಿಳಿದಾಗಲೂ ಆಶ್ಚರ್ಯ ಆಯಿತು. ಈಗ ಅವರು ಹೊರಗೆ ಬಂದ ನಂತರ ಎಲ್ಲವೂ ಗೊತ್ತಾಗುತ್ತದೆ’ ಎಂದು ಗೌತಮಿ ಜಾವದ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos