ತಾಜ್​ಮಹಲ್​ ಎದುರು ಹೆಂಡತಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಡೊನಾಲ್ಡ್ ಟ್ರಂಪ್ ಮಗ

Updated on: Nov 20, 2025 | 6:58 PM

ಡೊನಾಲ್ಡ್ ಟ್ರಂಪ್ ಅವರ ಮಗನ ಭೇಟಿಯ ಹಿನ್ನೆಲೆಯಲ್ಲಿ ತಾಜಮಹಲ್​ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಅನೇಕ ಅಮೇರಿಕನ್ ಏಜೆನ್ಸಿಗಳ ಅಮೇರಿಕನ್ ಭದ್ರತಾ ಏಜೆಂಟ್‌ಗಳನ್ನು ಸಹ ನಿಯೋಜಿಸಲಾಗಿತ್ತು. ತಾಜಮಹಲ್​​ಗೆ ಸಾಮಾನ್ಯ ಸಂದರ್ಶಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ತಾಜ್‌ ಮಹಲ್​ನ ಫೋಟೋ ಪಾಯಿಂಟ್‌ಗಳಲ್ಲಿ ಒಂದಾಗಿರುವ ಐಕಾನಿಕ್ ಡಯಾನಾ ಬೆಂಚ್‌ನಲ್ಲಿ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡರು.

ಆಗ್ರಾ, ನವೆಂಬರ್ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ತನ್ನ ಪತ್ನಿ ಮತ್ತು ವಿಐಪಿ ತಂಡದೊಂದಿಗೆ ಬೃಹತ್ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ತಾಜಮಹಲ್​ಗೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ಗುರುವಾರ ಆಗ್ರಾಕ್ಕೆ ತೆರಳಿ ತಾಜ್ ಮಹಲ್‌ಗೆ ಭೇಟಿ ನೀಡಿದರು. ಈ ಹಿಂದೆ 2018ರಲ್ಲೂ ಅವರು ತಾಜಮಹಲ್​​ಗೆ ಭೇಟಿ ನೀಡಿದ್ದರು. ಇದು ಅವರ 2ನೇ ಭೇಟಿ. ಇಂದು ಅವರು ತಮ್ಮ ಹೆಂಡತಿಯ ಜೊತೆ ತಾಜಮಹಲ್ ಎದುರು ಕುಳಿತು ಫೋಟೋಗೆ ಪೋಸ್ ನೀಡಿದರು. ತಾಜ್‌ ಮಹಲ್​ನ ಫೋಟೋ ಪಾಯಿಂಟ್‌ಗಳಲ್ಲಿ ಒಂದಾಗಿರುವ ಐಕಾನಿಕ್ ಡಯಾನಾ ಬೆಂಚ್‌ನಲ್ಲಿ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡರು.

ಡೊನಾಲ್ಡ್ ಟ್ರಂಪ್ ಅವರ ಮಗನ ಭೇಟಿಯ ಹಿನ್ನೆಲೆಯಲ್ಲಿ ತಾಜಮಹಲ್​ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಅನೇಕ ಅಮೇರಿಕನ್ ಏಜೆನ್ಸಿಗಳ ಅಮೇರಿಕನ್ ಭದ್ರತಾ ಏಜೆಂಟ್‌ಗಳನ್ನು ಸಹ ನಿಯೋಜಿಸಲಾಗಿತ್ತು. ತಾಜಮಹಲ್​​ಗೆ ಸಾಮಾನ್ಯ ಸಂದರ್ಶಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ