ಮೋದಿಯನ್ನು ಒಳ್ಳೆಯ ಸ್ನೇಹಿತನೆಂದು ಮತ್ತೆ ಹೊಗಳಿ ಭಾರತಕ್ಕೆ ಬರುವ ಸುಳಿವು ಕೊಟ್ಟ ಟ್ರಂಪ್
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ ಮತ್ತು ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಬ್ಬ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಅವರು ಬಣ್ಣಿಸಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ ಎಂಬ ತಮ್ಮ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

ವಾಷಿಂಗ್ಟನ್, ನವೆಂಬರ್ 07: ಭಾರತ(India) ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ನಡೆಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಸ್ವತಃ ಇದನ್ನು ದೃಢಪಡಿಸಿದ್ದಾರೆ. ವ್ಯಾಪಾರ ಒಪ್ಪಂದದ ಮಾತುಕತೆಗಳ ನಡುವೆ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ತಮ್ಮ ಉತ್ತಮ ಸ್ನೇಹಿತ ಎಂದು ಕರೆದಿದ್ದಾರೆ, ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದಾರೆ.
ತೂಕ ಇಳಿಸುವ ಔಷಧಿಗಳ ಬೆಲೆಗಳನ್ನು ಕಡಿಮೆ ಮಾಡಲು ಹೊಸ ಒಪ್ಪಂದವನ್ನು ಘೋಷಿಸಿದ ನಂತರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿಯವರೊಂದಿಗಿನ ತಮ್ಮ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಹೇಳಿದರು.
ಟ್ರಂಪ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಬಹುದು ಎಂಬ ಸುಳಿವು ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಹೊಗಳಿದ ಟ್ರಂಪ್, ಮೋದಿ ಉತ್ತಮ ಸ್ನೇಹಿತ ಮತ್ತು ಹಲವು ವಿಚಾರಗಳು ಕುರಿತು ನಾವು ಮಾತನಾಡುತ್ತಲೇ ಇರುತ್ತೇವೆ ಎಂದು ಹೇಳಿದರು.
ಮತ್ತಷ್ಟು ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್
ಭಾರತ ಭೇಟಿಗೆ ಸಂಬಂಧಿಸಿದಂತೆ ಮಾತನಾಡಿ, ಪ್ರಧಾನಿ ಮೋದಿ ಬಯಸಿದರೆ, ನಾನು ಭಾರತಕ್ಕೆ ಹೋಗುತ್ತೇನೆ ಎಂದರು. ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲದ ಖರೀದಿ ಬಗ್ಗೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಬಹುತೇಕ ನಿಲ್ಲಿಸಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಅವರು ಮತ್ತೊಮ್ಮೆ ಭಾರತ-ಪಾಕಿಸ್ತಾನ ಕದನ ವಿರಾಮದ ಶ್ರೇಯವನ್ನು ಪಡೆದ್ದಾರೆ. 24 ಗಂಟೆಗಳ ಒಳಗೆ ಭಾರತ-ಪಾಕಿಸ್ತಾನ ಯುದ್ಧವನ್ನು ತಡೆದಿದ್ದೇನೆ ಎಂದರು.
ಅಮೆರಿಕವು ಭಾರತೀಯ ಆಮದುಗಳ ಮೇಲೆ 50 ಪ್ರತಿಶತ ಸುಂಕವನ್ನು ವಿಧಿಸಿದೆ, ಇದರಲ್ಲಿ ಹೆಚ್ಚುವರಿ 25 ಪ್ರತಿಶತ ಸುಂಕವೂ ಸೇರಿದೆ. ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಹೊಗಳಿದರು. ಇಂಧನ ಆಮದಿನ ವಿಷಯದಲ್ಲಿ ವಾಷಿಂಗ್ಟನ್ ಮತ್ತು ದೆಹಲಿ ನಡುವೆ ಹೊಂದಾಣಿಕೆ ಹೆಚ್ಚಿಸುವ ಬಗ್ಗೆಯೂ ಅವರು ಸುಳಿವು ನೀಡಿದರು.
ರಷ್ಯಾದ ಇಂಧನ ಖರೀದಿಸುವ ವಿಚಾರದಲ್ಲಿ ಅಮೆರಿಕ ಮತ್ತು ಭಾರತ ನಡುವೆ ಕಂದಕ ಮೂಡಿತ್ತು. ಇದೇ ಕಾರಣಕ್ಕೆ ಟ್ರಂಪ್ ಟ್ಯಾರಿಫ್ ವಾರ್ ಆರಂಭಿಸಿದ್ದರು. ಇದೀಗ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುತ್ತಾ ಬಂದಿದೆ ಎಂದು ಟ್ರಂಪ್ ಹೇಳಿದರು. ಮಾಸ್ಕೋದಿಂದ ಕಚ್ಚಾ ತೈಲ ಆಮದುಗಳನ್ನು ಭಾರತ ನಿರ್ಬಂಧಿಸುತ್ತದೆ ಅಥವಾ ನಿಲ್ಲಿಸುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 7 November 25




