ಅಕ್ರಮ ಪರಮಾಣು ಚಟುವಟಿಕೆಗಳು ಪಾಕಿಸ್ತಾನದ ಇತಿಹಾಸದಲ್ಲೇ ಇದೆ; ಟ್ರಂಪ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ
ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಮುಂತಾದ ದೇಶಗಳು ಸಕ್ರಿಯವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅಮೆರಿಕ ಕೂಡ ತನ್ನದೇ ಆದ ಪರಮಾಣು ಪರೀಕ್ಷೆ ಆರಂಭಿಸಲಿದೆ ಎಂದು ಅವರು ಹೇಳಿದ್ದರು. ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

ನವದೆಹಲಿ, ನವೆಂಬರ್ 7: ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಯನ್ನು ನೀಡಿದ್ದರು. ಈ ರೀತಿ ರಹಸ್ಯ ಮತ್ತು ಕಾನೂನುಬಾಹಿರವಾದ ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದ (Pakistan) ಇತಿಹಾಸದಲ್ಲೇ ಇದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ. “ರಹಸ್ಯ ಮತ್ತು ಅಕ್ರಮ ಪರಮಾಣು ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದಲ್ಲಿ ಹೊಸತೇನಲ್ಲ. ಅದು ದಶಕಗಳಿಂದ ಕಳ್ಳಸಾಗಣೆ, ರಫ್ತು ನಿಯಂತ್ರಣ ಉಲ್ಲಂಘನೆ, ರಹಸ್ಯ ಪಾಲುದಾರಿಕೆಗಳನ್ನು ನಡೆಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಈ ರೀತಿ ಪಾಕಿಸ್ತಾನದ ಅಕ್ರಮ ಚಟುವಟಿಕೆಗಳ ಬಗ್ಗೆ ಭಾರತ ಯಾವಾಗಲೂ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪರಮಾಣು ಪರೀಕ್ಷೆಯ ಬಗ್ಗೆ ಯುಎಸ್ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ನಾವು ಗಮನಿಸಿದ್ದೇವೆ” ಎಂದು ಜೈಸ್ವಾಲ್ ಅವರು ಹೇಳಿದ್ದಾರೆ.
#WATCH | Delhi | MEA Official Spokesperson Randhir Jaiswal says, “Clandestine and illegal nuclear activities are in keeping with Pakistan’s history, that is centered around decades of smuggling, export control violations, secret partnerships, AQ Khan network and further… pic.twitter.com/4B4Gwe8xEE
— ANI (@ANI) November 7, 2025
ಇದನ್ನೂ ಓದಿ: ಟರ್ಕಿಯಲ್ಲಿ ಶಾಂತಿ ಮಾತುಕತೆಗಳ ನಡುವೆಯೇ ಕದನವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನಕ್ಕೆ ನುಗ್ಗಿದ ಪಾಕಿಸ್ತಾನ
ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಸೇರಿದಂತೆ ಹಲವಾರು ದೇಶಗಳು ಸಕ್ರಿಯವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ ಕೆಲವು ದಿನಗಳ ನಂತರ ಮತ್ತು ಅಮೆರಿಕ ತನ್ನದೇ ಆದ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುತ್ತದೆ ಎಂದು ಖಾತರಿಪಡಿಸಿದ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಭಾರತದ ಹೆಣ್ಣುಮಕ್ಕಳು ಯುದ್ಧವಿಮಾನವನ್ನೂ ಹಾರಿಸುತ್ತಿದ್ದಾರೆ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸಂದೇಶ
#WATCH | Delhi | MEA Official Spokesperson Randhir Jaiswal says, “We had the visit of the Foreign Minister of Afghanistan to India recently, since then, we’ve also had several exchanges in terms of development cooperation, as also a telephone conversation between the External… pic.twitter.com/zwi38iDEjc
— ANI (@ANI) November 7, 2025
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಕೂಡ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ. “ಇತ್ತೀಚೆಗೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಅಂದಿನಿಂದ, ಅಭಿವೃದ್ಧಿ ಸಹಕಾರದ ವಿಷಯದಲ್ಲಿ ನಾವು ಹಲವಾರು ವಿನಿಮಯಗಳನ್ನು ನಡೆಸಿದ್ದೇವೆ. ಅದರ ಜೊತೆಗೆ ವಿದೇಶಾಂಗ ಸಚಿವ ಮತ್ತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರ ನಡುವೆ ದೂರವಾಣಿ ಸಂಭಾಷಣೆಯನ್ನೂ ನಡೆಸಿದ್ದೇವೆ. ನಮ್ಮ ರಾಯಭಾರ ಕಚೇರಿ, ಕಾರ್ಯಾಚರಣೆ, ಕಾಬೂಲ್‌ನಲ್ಲಿರುವ ನಮ್ಮ ತಾಂತ್ರಿಕ ಕಾರ್ಯಾಚರಣೆಯನ್ನು ಮೇಲ್ದರ್ಜೆಗೇರಿಸುವಿಕೆಗೆ ಸಂಬಂಧಿಸಿದಂತೆ, ಅದನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




