Pooja Room Vastu Tips: ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ

|

Updated on: Aug 22, 2024 | 6:58 AM

ದೇವರ ಮನೆಯನ್ನು ಅತ್ಯಂತ ಪವಿತ್ರವಾದ ಜಾಗವೆಂದು ಭಾಗಿಸಲಾಗಿದೆ. ಹೀಗಾಗಿ ಆ ದೇವರ ಕೋಣೆಯಲ್ಲಿ ಏನು ಇಡಬೇಕು? ಏನು ಇಡಬಾರದು? ಇಟ್ಟರೆ ಏನಾಗಬಹುದು ಎಂಬ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ. ತುಂಡಾದ ದೇವರ ವಿಗ್ರಹಗಳು, ಹರಿದ ಧಾರ್ಮಿಕ ಪುಸ್ತಕಗಳು, ಪೂರ್ವಜರ ಚಿತ್ರಗಳನ್ನು ಇಡಬಾರದು ಎನ್ನಲಾಗುತ್ತೆ. ಈ ಬಗ್ಗೆ ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ.

ದೇವರ ಮನೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಬೇಕು. ಹಾಗೂ ಕೆಲವೊಂದು ವಿಗ್ರಹಗಳನ್ನು ಮಾತ್ರ ದೇವರ ಕೋಣೆಯಲ್ಲಿ ಇಡಬೇಕು. ಎಲ್ಲಾ ದೇವರುಗಳನ್ನು, ಇಷ್ಟ ಬಂದ ವಿಗ್ರಹಗಳನ್ನು ಇಡುವಂತಿಲ್ಲ ಎಂದು ಹಿಂದೂ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಗಂಗಾಜಲ, ಶಂಖ, ಸಾಲಿಗ್ರಾಮ ಶಿಲೆ, ಘನ ವಿಗ್ರಹ, ಗೋಮೂತ್ರ, ಪೂಜೆ ಪಾತ್ರೆ, ನವಿಲು ಗರಿ ಇವುಗಳು ಪ್ರತಿಯೊಂದು ದೇವರ ಮನೆಗಳಲ್ಲಿ ಇರಲೇ ಬೇಕಾದ ವಸ್ತುಗಳು. ಇವುಗಳನ್ನು ಇಡುವುದರಿಂದ ಶುಭ ಫಲ ಸಿಗುತ್ತದೆ. ಆದರೆ ಯಾವ ಯಾವ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬಾರದು ಎಂಬ ಬಗ್ಗೆ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on