Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವ; ಸಂಸದ ಯದುವೀರ್ ಭಾಗಿ

ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವ; ಸಂಸದ ಯದುವೀರ್ ಭಾಗಿ

ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Aug 22, 2024 | 9:00 AM

ರಾಯರ ಆರಾಧನೆಯಲ್ಲಿ ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಯದುವೀರ್ ಭಾಗಿಯಾಗಿದ್ದಾರೆ. ಯದುವೀರ್ ಅವರು ಶಿಲಾಮಂಟಪದ ಮುಂಭಾಗದಲ್ಲಿ ವಿನ್ಯಾಸಗೊಳಿಸಲಾದ ಚಿನ್ನದ ಲೇಪನದ ಕವಚ ಉದ್ಘಾಟಿಸಿದರು. ಇಂದು ಯದುವೀರ್ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ರಾಯಚೂರು, ಆಗಸ್ಟ್​.22: ಮಂತ್ರಾಲಯದ ರಾಯರ ಆರಾಧನಾ ಮಹೋತ್ಸವ (Sri Raghavendra Swamy Aradhana Mahotsava) ಹಿನ್ನೆಲೆ ರಾಯರ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಮಂತ್ರಾಲಯದ ರಾಯರ ಮಠದಲ್ಲಿಂದು ಉತ್ತರಾಧನೆ ಸಂಭ್ರಮ ಮನೆ ಮಾಡಿದ್ದು ರಾಯರ ಆರಾಧನೆಯಲ್ಲಿ ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಯದುವೀರ್ ಭಾಗಿಯಾಗಿದ್ದಾರೆ.

ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸಂಸದ ಯದುವೀರ್ ಅವರಿಗೆ ಸ್ವಾಗತ ಮಾಡಿದರು. ಬಳಿ ಯದುವೀರ್ ಮಂಚಾಲಮ್ಮ ಹಾಗೂ ಮೂಲ ರಾಯರ ವೃಂದಾವನದ ದರ್ಶನ ಪಡೆದರು. ಶಿಲಾಮಂಟಪದ ಮುಂಭಾಗದಲ್ಲಿ ವಿನ್ಯಾಸಗೊಳಿಸಲಾದ ಚಿನ್ನದ ಲೇಪನದ ಕವಚ ಉದ್ಘಾಟಿಸಿದರು. ಇಂದು ಯದುವೀರ್ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ