ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ

ಗಜಪಡೆಯ ಲೀಡರ್ ಆಗಿರುವ ಅಭಿಮನ್ಯು ಎಂದಿನಂತೆ ತನ್ನ ಶಾಂತ ಮತ್ತು ಮೃದು ಸ್ವಭಾವದಿಂದ ಗಮನ ಸೆಳೆಯುತ್ತಾನೆ. ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಏಕಲವ್ಯನಿಗೆ ಈ ವರ್ಷದಿಂದ ತಾಲೀಮು ಶುರುವಾಗಲಿದೆ. ಮುಂಬರುವ ದಿನಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಅವನ ಮೇಲೆ ಬೀಳಲಿದೆ.

ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ
|

Updated on: Aug 22, 2024 | 11:47 AM

ಮೈಸೂರು: ಈಗಾಗಲೇ ನಾವು ವರದಿ ಮಾಡಿರುವಂತೆ ಕರ್ನಾಟಕ ಸರ್ಕಾರ ದಸರಾ ಮಹೋತ್ಸವ-2024 ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಅದಕ್ಕಾಗಿ ತಯಾರಿಗಳು ಶುರುವಾಗಿವೆ. ದಸರಾ ಉತ್ಸವದ ಮುಖ್ಯ ಆಕರ್ಷಣೆಯೆಂದರೆ ಜಂಬೂ ಸವಾರಿ. ಇದರಲ್ಲಿ ಭಾಗಿಯಾಗುವ ಆನೆಗಳ ಮೊದಲ ತಂಡವನ್ನು ವೀರನಹೊಸಳ್ಳಿ ಕಾಡಿನಿಂದ ಮೈಸೂರಿಗೆ ಲಾರಿಗಳಲ್ಲಿ ಕರೆತರಲಾಗಿದ್ದು ಅವುಗಳನ್ನು ನಗರದ ಅಶೋಕನಗರದಲ್ಲಿರುವ ಅರಣ್ಯಭವನದಲ್ಲಿ ಇರಿಸಲಾಗಿದೆ ಎಂದು ನಮ್ಮ ಮೈಸೂರು ವರದಿಗಾರ ಹೇಳುತ್ತಾರೆ. ಮೊದಲ ತಂಡದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು ಜೊತೆ ಇದೇ ಮೊದಲಬಾರಿಗೆ ನಾಡಿಗೆ ಬಂದು ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿರುವ ಏಕಲವ್ಯ ಮತ್ತು ಇತರ ಏಳು ಆನೆಗಳು ಮೈಸೂರಿಗೆ ಆಗಮಿಸಿವೆ. ಇನ್ನೂ ಐದು ಆನೆಗಳು ಇಂದು ಸಾಯಂಕಾಲ ಬರಲಿವೆ. ವರದಿಗಾರ ಹೇಳುವಂತೆ ಎಲ್ಲ 13 ಆನೆಗಳನ್ನು ನಾಳೆ ಅರಣ್ಯಭವನದಿಂದ ಕಾಲ್ನಡಿಗೆಯಲ್ಲಿ ಅರಮನೆಗೆ ಕರೆದೊಯ್ಯಲಾಗುತ್ತದೆ ಮತ್ತು ಅವುಗಳ ಸಾಂಪ್ರದಾಯಿಕ ಸ್ವಾಗತ ಪೂಜೆಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಸರಾ ಮಹೋತ್ಸವ-2024: ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರದ ಸಂಕಲ್ಪ

Follow us
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ