ದಸರಾ ಮಹೋತ್ಸವ-2024: ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರದ ಸಂಕಲ್ಪ
ಏತನ್ಮಧ್ಯೆ, ಸರ್ಕಾರದ ಉದ್ದೇಶಿತ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹಿಂದಿನ ಮೈಸೂರು ಒಡೆಯರ್ ಅರಸೊತ್ತಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಇಂದು ಮೈಸೂರು ಅರಮನೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ರಾಜಮಾತೆ ಪ್ರಮೋದಾ ದೇವಿಯವರು, ದಾಖಲೆಗಳ ಪ್ರಕಾರ ಚಾಮುಂಡೇಶ್ವರಿ ದೇವಸ್ಥಾನ ಒಡಯರ್ ಅರಸೊತ್ತಿಗೆಗೆ ಸೇರಿದ ಆಸ್ತಿಯಾಗಿದೆ, ಒಡೆಯರ್ ಮನೆತನವೇ ಅದರ ನಿರ್ವಹಣೆ ಮಾಡಲು ತಯಾರಿದೆ ಎಂದು ಹೇಳಿದರು.
ಬೆಂಗಳೂರು: ಸಕಾಲದಲ್ಲಿ ಸುರಿಯುವ ಮಳೆ ತನ್ನೊಂದಿಗೆ ಹೊತ್ತು ತರುವ ಹರ್ಷ ಉಲ್ಲಾಸಗಳೇ ಹಾಗೆ. ರಾಜ್ಯದಲ್ಲಿ ಸುರಿದ ಸಮೃದ್ಧ ಮಳೆಯಿಂದ ಸಂತುಷ್ಟಗೊಂಡಿರುವ ರಾಜ್ಯ ಸರ್ಕಾರ ಈ ಬಾರಿಯ ದಸರಾ ಮಹೋತ್ಸವವನ್ನು ಮತ್ತಷ್ಟು ವೈಭವೋಪೇತವಾಗಿ ಆಚರಿಸಲು ನಿರ್ಧರಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಉನ್ನತಮಟ್ಟದ ಸಭೆಯೊಂದನ್ನು ನಡೆಸಿದರು. ಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹ ಭಾಗಿಯಾಗಿದ್ದರು.. ಅವರು ಮಾತ್ರವಲ್ಲ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಎಲ್ಲ ಶಾಸಕರು ಭಾಗಿಯಾಗಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆಜೆ ಜಾರ್ಜ್, ಕೆ ವೆಂಕಟೇಶ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಹಲವಾರು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಸರಾ ಮಹೋತ್ಸವ-2023: ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣೆ: ಇಲ್ಲಿವೆ ಫೋಟೋಸ್