ಅಕ್ಟೋಬರ್ 3 ರಿಂದ 12 ವರೆಗೆ ದಸರಾ ಉತ್ಸವ: ಈ ಬಾರಿ ಏನೆಲ್ಲಾ ವಿಶೇಷ ಇರುತ್ತೆ? ಇಲ್ಲಿದೆ ವಿವರ
ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಇಂದು (ಆಗಸ್ಟ್ 12) ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ದಸರಾ ಉತ್ಸವ ಅಕ್ಟೋಬರ್ 3 ರಿಂದ 12 ವರೆಗೂ ನಡೆಯಲಿದೆ. ಇನ್ನು ಅಕ್ಟೋಬರ್ 3ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯಾಗಿದೆ. ಹಾಗಾದ್ರೆ, ಈ ಬಾರಿ ದಸರಾ ಏನೆಲ್ಲಾ ವಿಶೇಷತೆಗಳಿರುತ್ತವೆ ಎನ್ನುವ ವಿವರನ್ನು ಸಿದ್ದರಾಮಯ್ಯ ನೀಡಿದ್ದಾರೆ.
ಬೆಂಗಳೂರು (ಆಗಸ್ಟ್.12): ವಿಶ್ವವಿಖ್ಯಾತ ದಸರಾ ಮಹೋತ್ಸವ 2024 ಅಕ್ಟೋಬರ್ 3ರಿಂದ ಅ.12ರವರೆಗೆ ನಡೆಯಲಿದೆ. ಒಟ್ಟು 21 ದಿನಗಳ ಕಾಲ ದೀಪಾಲಂಕಾರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು. ಈ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 3 ರಿಂದ 12 ನೇ ತಾರೀಕಿನವರೆಗೆ ದಸರಾ ಮಹೋತ್ಸವ ನಡೆಯಲಿದೆ. ಅ.3ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅ.12ನೇ ತಾರೀಕು ಜಂಬೂ ಸವಾರಿ ನಡೆಯಲಿದೆ. ಇನ್ನು ಯಾರು ಉದ್ಘಾಟನೆ ಮಾಡಬೇಕು ಎಂಬುದರ ತೀರ್ಮಾನ ಮಾಡಲು ಸಬೆಯಲ್ಲಿ ಸರ್ವಾನುಮತದಿಂದ ನನಗೆ ಅಧಿಕಾರ ಕೊಟ್ಟಿದ್ದಾರೆ. 3-4 ದಿನಗಳಲ್ಲಿ ನಾನು ಯಾರು ಅಂತಾ ಘೋಷಣೆ ಮಾಡ್ತೀನಿ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
Latest Videos