AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ದರ್ಶನ್​ಗಾಗಿ ಚೀಲದ ತುಂಬ ಹಣ್ಣು ತಂದ ವಿಜಯಲಕ್ಷ್ಮಿ

ಪತಿ ದರ್ಶನ್​ಗಾಗಿ ಚೀಲದ ತುಂಬ ಹಣ್ಣು ತಂದ ವಿಜಯಲಕ್ಷ್ಮಿ

ಮಂಜುನಾಥ ಸಿ.
|

Updated on: Aug 12, 2024 | 7:13 PM

Share

Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅನ್ನು ಕಾಣಲು ಬಂದಿದ್ದ ಪತ್ನಿ ವಿಜಯಲಕ್ಷ್ಮಿ ದರ್ಶನ್, ಪತಿಗಾಗಿ ಎರಡು ಬ್ಯಾಗುಗಳ ತುಂಬ ಹಣ್ಣುಗಳನ್ನು ತಂದಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹೊರಗಡೆ ಇದ್ದಾಗ ಪೌಷ್ಠಿಕ ಆಹಾರಗಳನ್ನು ಸೇವಿಸುತ್ತಾ, ವ್ಯಾಯಾಮ ಮಾಡುತ್ತಾ ದೈಹಿಕ ಆರೋಗ್ಯ ಕಾಪಾಡಿಕೊಂಡಿದ್ದರು ದರ್ಶನ್. ಆದರೆ ಜೈಲಿನ ಊಟ ಅವರಿಗೆ ಸರಿ ಹೊಂದುತ್ತಿಲ್ಲ. ಮನೆ ಊಟಕ್ಕಾಗಿ ದರ್ಶನ್ ಬೇಡಿಕೆ ಸಲ್ಲಿಸಿದ್ದರಾದರೂ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಹಾಗಾಗಿ ಈಗ ದರ್ಶನ್​ಗೆ ಜೈಲಿನ ಊಟವೇ ಖಾಯಂ ಆಗಿದೆ. ಮನೆ ಊಟಕ್ಕೆ ನ್ಯಾಯಾಲಯ ಬೇಡ ಎಂದಿದೆ ಆದರೆ ಹಣ್ಣು-ಹಂಪಲುಗಳನ್ನು ಧಾರಾಳವಾಗಿ ನೀಡಬಹುದಾಗಿದೆ. ಇಂದು (ಆಗಸ್ಟ್ 12) ದರ್ಶನ್​ ಅನ್ನು ಕಾಣಲು ಜೈಲಿಗೆ ಬಂದ ವಿಜಯಲಕ್ಷ್ಮಿ ಹಾಗೂ ಕೆಲವರು ಬಂಧುಗಳು ದರ್ಶನ್​ಗಾಗಿ ಎರಡು ಬ್ಯಾಗುಗಳ ತುಂಬ ಹಣ್ಣುಗಳನ್ನು ತಂದಿದ್ದರು. ಆಗಸ್ಟ್ 18ರ ವರೆಗೆ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ಮುಂದುವರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ