Dorai Bhagavan: ‘ಡಾ. ರಾಜ್​​ ಕುಟುಂಬಕ್ಕೆ ಬಲಗೈ ಬಂಟ ಆಗಿದ್ದರು’: ಎಸ್​.ಕೆ. ಭಗವಾನ್​​ ಕುರಿತ ನೆನಪು ತೆರೆದಿಟ್ಟ ಚಿನ್ನೇಗೌಡ

|

Updated on: Feb 20, 2023 | 4:04 PM

S K Bhagavan Death: ಡಾ. ರಾಜ್​ಕುಮಾರ್​ ಫ್ಯಾಮಿಲಿಗೆ ಎಸ್​.ಕೆ. ಭಗವಾನ್​ ಅವರು ತುಂಬ ಆಪ್ತರಾಗಿದ್ದರು. ಆ ದಿನಗಳನ್ನು ನಿರ್ಮಾಪಕ ಎಸ್​.ಎ. ಚಿನ್ನೇಗೌಡ ಮೆಲುಕು ಹಾಕಿದ್ದಾರೆ.

ಖ್ಯಾತ ನಿರ್ದೇಶಕ ಎಸ್​.ಕೆ. ಭಗವಾನ್​ (S K Bhagavan) ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಇಂದು (ಫೆ.20) ಇಹಲೋಕ ತ್ಯಜಿಸಿದ ಅವರಿಗೆ ಚಂದನವನದ ಅನೇಕರು ನುಡಿ ನಮನ ಸಲ್ಲಿಸಿದ್ದಾರೆ. ನಿರ್ಮಾಪಕ ಎಸ್​.ಎ. ಚಿನ್ನೇಗೌಡ ಅವರು ಎಸ್​.ಕೆ. ಭಗವಾನ್​ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಬಾವ ಡಾ. ರಾಜ್​ಕುಮಾರ್​ (Dr Rajkumar) ಅವರ ಕುಟುಂಬಕ್ಕೆ ಭಗವಾನ್​ ಆಪ್ತರಾಗಿದ್ದರು. ಶಿವರಾಜ್​ಕುಮಾರ್​ ಹುಟ್ಟಿದಾಗಿನಿಂದಲೂ ನಮ್ಮ ಕುಟುಂಬಕ್ಕೆ ಅವರು ಹತ್ತಿರವಾಗಿದ್ದರು. ಮದ್ರಾಸ್​ನಲ್ಲಿ ಇದ್ದಾಗ ಅಣ್ಣಾವ್ರ ಮನೆಯ ಎಲ್ಲ ಆಗು-ಹೋಗುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ನಮ್ಮ ಅಕ್ಕ ಪಾರ್ವತಮ್ಮನವರಿಗೆ ಮತ್ತು ರಾಜ್​ಕುಮಾರ್​ ಅವರಿಗೆ ಬಲಗೈ ಬಂಟನಂತೆ ಇದ್ದವರು ಭಗವಾನ್​’ ಎಂದು ಚಿನ್ನೇಗೌಡ (SA Chinne Gowda) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Feb 20, 2023 04:04 PM