IAS Vs IPS: ರೋಹಿಣಿಯವರ ಸೌಂದರ್ಯವೇ ಡಿಕೆ ರವಿಯವರ ಸಾವಿಗೆ ಕಾರಣವಾಯಿತು ಅನ್ನುತ್ತಾರೆ ಸ್ವರ್ಗಸ್ಥ ಅಧಿಕಾರಿ ಅಭಿಮಾನಿ ಸಂಘದ ಅಧ್ಯಕ್ಷ!

IAS Vs IPS: ರೋಹಿಣಿಯವರ ಸೌಂದರ್ಯವೇ ಡಿಕೆ ರವಿಯವರ ಸಾವಿಗೆ ಕಾರಣವಾಯಿತು ಅನ್ನುತ್ತಾರೆ ಸ್ವರ್ಗಸ್ಥ ಅಧಿಕಾರಿ ಅಭಿಮಾನಿ ಸಂಘದ ಅಧ್ಯಕ್ಷ!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 20, 2023 | 5:01 PM

ರೋಹಿಣಿ ಸೌಂದರ್ಯವೇ ರವಿಯವರ ಸಾವಿಗೆ ಕಾರಣವಾಯಿತು ಅವರ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಕೇಸ್ ದಾಖಲಿಸಬೇಕು ಅಂತಲೂ ಮುರಳಿಗೌಡ ಹೇಳುತ್ತಾರೆ!

ಕೋಲಾರ: ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಅಂತ ಹೇಳುತ್ತಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ವಿಷಯದಲ್ಲೂ ಇದೇ ಆಗುತ್ತಿದೆ. ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಅವರು ರೋಹಿಣಿ ಕುರಿತು ಆರೋಪಗಳನ್ನು ಮಾಡುತ್ತಿದ್ದಂತೆ ಜನ ತಲಾವೊಂದು ತಲೆಗೊಂದು ಮಾತಾಡುತ್ತಿದ್ದಾರೆ. ಇಲ್ನೋಡಿ ಇದು ಡಿಕೆ ರವಿ (DK Ravi) ಅಭಿಮಾನಿಗಳ ಸಃಘದ ಅಧ್ಯಕ್ಷ ಮುರಳಿಗೌಡ ಅಂತ, ಇವರಿಗೆ ಪ್ರಕರಣದ ಬಗ್ಗೆ ಎಷ್ಟು ಮಾಹಿತಿ ಇದೆ ಅವರಿಗೆ ಮಾತ್ರ ಗೊತ್ತು. ಆದರೆ ಡಿ ರೂಪಾ ಪರ ವಹಿಸಿಕೊಂಡು ಮಾತಾಡುವ ಮುರಳಿ ರೋಹಿಣಿ ಸಹ್ಯವಲ್ಲದ ತಮ್ಮ ಫೋಟೋಗಳನ್ನು ಇತರ ಐಎಎಸ್ ಅಧಿಕಾರಿಗಳಿಗೆ, ಶಾಸಕರಿಗೆ ಕಳಿಸಿರುವ ಸಾಧ್ಯತೆಯಿದೆ ಎನ್ನುತ್ತಾರೆ. ಜನ ಎಷ್ಟು ಬೇಗ ಜಡ್ಜ್ಮೆಂಟ್ ಪಾಸ್ ಮಾಡಿಬಿಡುತ್ತಾರೆ ಅನ್ನೋದನ್ನ ಗಮನಿಸಿ. ರೋಹಿಣಿ ಸೌಂದರ್ಯವೇ ರವಿಯವರ ಸಾವಿಗೆ ಕಾರಣವಾಯಿತು ಅವರ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಕೇಸ್ ದಾಖಲಿಸಬೇಕು ಅಂತಲೂ ಮುರಳಿಗೌಡ ಹೇಳುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 20, 2023 05:01 PM