Dorai Bhagavan: ‘ಡಾ. ರಾಜ್ ಕುಟುಂಬಕ್ಕೆ ಬಲಗೈ ಬಂಟ ಆಗಿದ್ದರು’: ಎಸ್.ಕೆ. ಭಗವಾನ್ ಕುರಿತ ನೆನಪು ತೆರೆದಿಟ್ಟ ಚಿನ್ನೇಗೌಡ
S K Bhagavan Death: ಡಾ. ರಾಜ್ಕುಮಾರ್ ಫ್ಯಾಮಿಲಿಗೆ ಎಸ್.ಕೆ. ಭಗವಾನ್ ಅವರು ತುಂಬ ಆಪ್ತರಾಗಿದ್ದರು. ಆ ದಿನಗಳನ್ನು ನಿರ್ಮಾಪಕ ಎಸ್.ಎ. ಚಿನ್ನೇಗೌಡ ಮೆಲುಕು ಹಾಕಿದ್ದಾರೆ.
ಖ್ಯಾತ ನಿರ್ದೇಶಕ ಎಸ್.ಕೆ. ಭಗವಾನ್ (S K Bhagavan) ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಇಂದು (ಫೆ.20) ಇಹಲೋಕ ತ್ಯಜಿಸಿದ ಅವರಿಗೆ ಚಂದನವನದ ಅನೇಕರು ನುಡಿ ನಮನ ಸಲ್ಲಿಸಿದ್ದಾರೆ. ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರು ಎಸ್.ಕೆ. ಭಗವಾನ್ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಬಾವ ಡಾ. ರಾಜ್ಕುಮಾರ್ (Dr Rajkumar) ಅವರ ಕುಟುಂಬಕ್ಕೆ ಭಗವಾನ್ ಆಪ್ತರಾಗಿದ್ದರು. ಶಿವರಾಜ್ಕುಮಾರ್ ಹುಟ್ಟಿದಾಗಿನಿಂದಲೂ ನಮ್ಮ ಕುಟುಂಬಕ್ಕೆ ಅವರು ಹತ್ತಿರವಾಗಿದ್ದರು. ಮದ್ರಾಸ್ನಲ್ಲಿ ಇದ್ದಾಗ ಅಣ್ಣಾವ್ರ ಮನೆಯ ಎಲ್ಲ ಆಗು-ಹೋಗುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ನಮ್ಮ ಅಕ್ಕ ಪಾರ್ವತಮ್ಮನವರಿಗೆ ಮತ್ತು ರಾಜ್ಕುಮಾರ್ ಅವರಿಗೆ ಬಲಗೈ ಬಂಟನಂತೆ ಇದ್ದವರು ಭಗವಾನ್’ ಎಂದು ಚಿನ್ನೇಗೌಡ (SA Chinne Gowda) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Feb 20, 2023 04:04 PM
Latest Videos