IAS Vs IPS: ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಮಾಡಿರುವ ಆರೋಪಗಳು ಪ್ರಸ್ತುತ ಮತ್ತು ಆಧಾರಸಹಿತವಾಗಿವೆ: ಪ್ರತಾಪ್ ಸಿಂಹ, ಸಂಸದ

IAS Vs IPS: ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಮಾಡಿರುವ ಆರೋಪಗಳು ಪ್ರಸ್ತುತ ಮತ್ತು ಆಧಾರಸಹಿತವಾಗಿವೆ: ಪ್ರತಾಪ್ ಸಿಂಹ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2023 | 6:21 PM

ರೂಪಾ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಮಾಧ್ಯಮವರು ಪತ್ತೆ ಮಾಡಬೇಕೆಂದು ಹೇಳಿದ ಸಂಸದರು, ಐಪಿಎಸ್ ಅಧಿಕಾರಿಯು ರೋಹಿಣಿಯವರ ವೈಯಕ್ತಿಕ ವಿಷಯಗಳ ಬಗ್ಗೆ ಮಾತಾಡುತ್ತಿರುವ ಬಗ್ಗೆ ಜಾಣ ಕುರುಡು, ಕಿವುಡು ಎರಡನ್ನೂ ಪ್ರದರ್ಶಿಸುತ್ತಾರೆ.

ಮೈಸೂರು: ಐಪಿಎಸ್ ಅಧಿಕಾರಿ ಡಿ ರೂಪಾ (D Roopa) ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾಡಿರುವ ಆಪಾದನೆಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಮೈಸೂರಲ್ಲಿಂದು ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತಾಡಿದ ಸಂಸದರು ಹಿಂದೆ ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ನೂರಾರು ಜನ ಸತ್ತ ಸಂಗತಿಯನ್ನು ಸಹ ರೂಪಾ ತಮ್ಮ ಆರೋಪಗಳಲ್ಲಿ ಉಲ್ಲೇಖಿಸಿದ್ದಾರೆ. ರೂಪಾ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಮಾಧ್ಯಮವರು ಪತ್ತೆ ಮಾಡಬೇಕೆಂದು ಹೇಳಿದ ಸಂಸದರು, ಐಪಿಎಸ್ ಅಧಿಕಾರಿಯು ರೋಹಿಣಿಯವರ ವೈಯಕ್ತಿಕ ವಿಷಯಗಳ ಬಗ್ಗೆ ಮಾತಾಡುತ್ತಿರುವ ಬಗ್ಗೆ ಜಾಣ ಕುರುಡು, ಕಿವುಡು ಎರಡನ್ನೂ ಪ್ರದರ್ಶಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ