BBK Drone Prathap: ‘ಕಷ್ಟದಲ್ಲಿರುವ ಡೆಲಿವರಿ ಬಾಯ್ಸ್​ಗೆ ಬೈಕ್ ಕೊಡ್ತೀನಿ’; ಪ್ರತಾಪ್ ಭರವಸೆ

Updated on: Jan 29, 2024 | 10:33 AM

ಸಂಗೀತಾ ಶೃಂಗೇರಿ, ವಿನಯ್ ಗೌಡ ಅವರಂಥ ಘಟಾನುಘಟಿ ಕಲಾವಿದರನ್ನು ಹಿಂದಿಕ್ಕಿ ಸುದೀಪ್ ಪಕ್ಕ ನಿಂತರು ಪ್ರತಾಪ್. ಅಂತಿಮವಾಗಿ ಕಾರ್ತಿಕ್​ ಕೈನ ಸುದೀಪ್ ಎತ್ತಿದರು. ಈ ಕುರಿತು ಪ್ರತಾಪ್ ಅವರಿಗೆ ಯಾವುದೇ ಬೇಸರ ಇಲ್ಲ.

ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಕಲಾವಿದರನ್ನು ಹಿಂದಿಕ್ಕಿ ಸುದೀಪ್ ಪಕ್ಕ ನಿಂತರು ಪ್ರತಾಪ್. ಅಂತಿಮವಾಗಿ ಕಾರ್ತಿಕ್​ ಕೈನ ಸುದೀಪ್ ಎತ್ತಿದರು. ಈ ಬಗ್ಗೆ ಪ್ರತಾಪ್ ಅವರಿಗೆ ಯಾವುದೇ ಬೇಸರ ಇಲ್ಲ. ‘ನನಗೆ ಇಲ್ಲಿಯವರೆಗೆ ಬಂದಿದ್ದು ಖುಷಿ ಇದೆ’ ಎಂದು ವೇದಿಕೆ ಮೇಲೆ ಹೇಳಿದ್ದಾರೆ ಪ್ರತಾಪ್. ಈ ಮಧ್ಯೆ ಪ್ರತಾಪ್ (Drone Prathap) ಅವರು ತಮಗೆ ಸಿಕ್ಕ ಬೌನ್ಸ್ ಸ್ಕೂಟರ್​ನ ಫುಡ್ ಡೆಲಿವರಿ ಬಾಯ್​ಗೆ ನೀಡುವುದಾಗಿ ಹೇಳಿದ್ದಾರೆ. ಪ್ರತಾಪ್ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 29, 2024 08:50 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More