ವೈದ್ಯೆಯ ಕೊಲೆ ಪ್ರಕರಣ: ಕೋಟಿ ರೂ. ಬೆಲೆಯ ಮನೆ ಆಶ್ರಮಕ್ಕೆ ಕೊಟ್ಟ ಪೋಷಕರು

Updated on: Oct 16, 2025 | 10:11 AM

ಡಾ. ಕೃತಿಕಾ ಅವರ ಕೊಲೆ ಪ್ರಕರಣ ಆರು ತಿಂಗಳ ನಂತರ ಬೆಳಕಿಗೆ ಬಂದ ಬೆನ್ನಲ್ಲೇ, ಕೊಲೆ ಸಂಬಂಧ ವಿವಿಧ ರೀತಿಯ ಮಾಹಿತಿಗಳು ಕೂಡ ಬಹಿರಂಗವಾಗುತ್ತಿವೆ. ಸದ್ಯ, ಆಕೆ ವಾಸಿಸುತ್ತಿದ್ದ ಕೋಟಿ ರೂ. ಬೆಲೆಬಾಳುವ ಮನೆಯನ್ನುಇಸ್ಕಾನ್​​ನವರಿಗೆ ದಾನ ಮಾಡಿರುವುದಾಗಿ ಆಕೆಯ ಸಹೋದರಿ ಡಾ. ನಿಖಿತಾ ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ ವೈದ್ಯ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪ್ರಕರಣ 6 ತಿಂಗಳ ನಂತರ ಬೆಳಕಿಗೆ ಬಂದಿದ್ದು, ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ ಕೃತಿಕಾ ಕುಟುಂಬದವರು ಆಕೆಯ ಸಮಾಜ ಸೇವಾ ಕನಸುಗಳನ್ನು ಕೂಡ ನೆನಪಿಸಿಕೊಂಡಿದ್ದು, ಈ ಕಾರಣಕ್ಕಾಗಿಯೇ ಆಕೆ ವಾಸಿಸುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಮನೆಯನ್ನು ಇಸ್ಕಾನ್​ನವರ ಆಶ್ರಮಕ್ಕೆ ದಾನ ಮಾಡಿರುವುದಾಗಿ ಸಹೋದರಿ ಡಾ. ನಿಖಿತಾ ತಿಳಿಸಿದ್ದಾರೆ. ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ