‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್ ಬಗ್ಗೆ ಡಾ. ರಾಜ್ ಮೊಮ್ಮಗಳ ಮನದ ಮಾತು
‘ಇನ್ನೂ ಸ್ವಲ್ಪ ದಿನಗಳ ಕಾಲ ತಾತ (ಡಾ. ರಾಜ್ಕುಮಾರ್) ನಮ್ಮ ಜೊತೆ ಇರಬಹುದಿತ್ತು. ಈ ಸಂದರ್ಭದಲ್ಲಿ ಅವರಿಂದ ಸಿಗಬಹುದಾಗಿದ್ದ ಸಲಹೆ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತಿತ್ತು’ ಎಂದು ತಮ್ಮ ಮೊದಲ ಸಿನಿಮಾ ಬಿಡುಗಡೆ ಸಮಯದಲ್ಲಿ ಧನ್ಯಾ ರಾಮ್ಕುಮಾರ್ ಮಾತನಾಡಿದ್ದಾರೆ.
ಡಾ. ರಾಜ್ಕುಮಾರ್ (Dr Rajkumar) ಮೊಮ್ಮಗಳು ಧನ್ಯಾ ರಾಮ್ಕುಮಾರ್ (Dhanya Ramkumar) ನಟನೆಯ ಮೊದಲ ಸಿನಿಮಾ ‘ನಿನ್ನ ಸನಿಹಕೆ’ (Ninna Sanihake) ಆ.20ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ತಾತ ಇರಬೇಕಿತ್ತು ಎಂದು ಅವರು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್ ಜೊತೆ ಕಳೆದ ಬಾಲ್ಯದ ದಿನಗಳನ್ನು ಧನ್ಯಾ ರಾಮ್ಕುಮಾರ್ ಮೆಲುಕು ಹಾಕಿದ್ದಾರೆ. ‘ತಾತ ನನ್ನನ್ನು ಕ್ಯೂಟ್ ಆಗಿ ಅಮ್ಮೆ ಎಂದು ಕರೆಯುತ್ತಿದ್ದರು. ನನ್ನನ್ನು ಮಾತ್ರ ಅವರು ಹಾಗೆ ಕರೆಯುತ್ತಿದ್ದರು. ಅವರ ಕೊನೆಯ ಮ್ಯೂಸಿಕಲ್ ನೈಟ್ಗೆ ನಾನು ಹೋಗಿದ್ದೆ. ನಾನು ಕೂಡ ಅವರ ಜೊತೆ ವೇದಿಕೆ ಮೇಲೆ ಕುಳಿತಿದ್ದೆ. ಅಂಥ ಅನುಭವ ಮತ್ತೆ ನನ್ನ ಜನ್ಮದಲ್ಲಿ ಸಿಗಲು ಸಾಧ್ಯವಿಲ್ಲ’ ಎಂದು ಧನ್ಯಾ ಹೇಳಿದ್ದಾರೆ.
‘ಇನ್ನೂ ಸ್ವಲ್ಪ ದಿನಗಳ ಕಾಲ ತಾತ ನಮ್ಮ ಜೊತೆ ಇರಬಹುದಿತ್ತು. ಈ ಸಂದರ್ಭದಲ್ಲಿ ಅವರಿಂದ ಸಿಗಬಹುದಾಗಿದ್ದ ಸಲಹೆ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತಿತ್ತು. ಸ್ಯಾಂಡಲ್ವುಡ್ನಲ್ಲಿ ಇರುವವರಿಗೆಲ್ಲ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ನಲ್ಲಿ ಒಂದಾದರೂ ಸಿನಿಮಾ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನನಗೂ ಆಸೆ ಇದೆ’ ಎಂದು ಧನ್ಯಾ ಹೇಳಿದ್ದಾರೆ.
ಇದನ್ನೂ ಓದಿ:
Rajkumar Death Anniversary: ಡಾ. ರಾಜ್ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!
ಡಾ. ರಾಜ್ಕುಮಾರ್ ಜತೆ ದಿಲೀಪ್ ಕುಮಾರ್ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್