ಬೆಂಗಳೂರಲ್ಲಿ ಬೇಸಿಗೆಯ ಅಕಾಲಿಕ ಮಳೆಗೆ ತಲೆಯೆತ್ತಿದ ಅದೇ ಹಳೆಯ ಸಮಸ್ಯೆ, ಮನೆಗಳಿಗೆ ನುಗ್ಗಿದ ಕೊಳಚೆ ನೀರು!

|

Updated on: May 10, 2024 | 10:25 AM

ಮಳೆಗಾಲ ಶುರುವಾಗಲು ಇನ್ನೂ ಒಂದು ತಿಂಗಳು ಬಾಕಿಯಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಗರದ ಸೆಲಿಬ್ರಿಟಿಗಳನ್ನು ಕರೆದು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮೀಟಿಂಗ್ ಗಳನ್ನು ನಡೆಸಿ ಸಮಯ ವ್ಯರ್ಥ ಮಾಡುವ ಬದಲು ನಗರದ ಮೂಲಭೂತ ಸೌಕರ್ಯಗಳ ಕಡೆ ಕೂಡಲೇ ಗಮನ ಹರಿಸಬೇಕು.

ಬೆಂಗಳೂರು: ಮಳೆಗಾಲವಿನ್ನೂ ಶುರುವಾಗಿಲ್ಲ, ನಿನ್ನೆ ಬೆಂಗಳೂರು ನಗರದ ಹಲವಾರು ಭಾಗಗಳಲ್ಲಿ ಸುರಿದಿದ್ದು ಬೇಸಿಗೆಯ ಅಕಾಲಿಕ ಮಳೆ (untimely rains) ಮತ್ತು ಎಲ್ಲೋ ವಾಯುಭಾರ ಕುಸಿತ (depression) ಉಂಟಾಗಿದ್ದರ ಪರಿಣಾಮ. ಆದರೆ ರಾತ್ರಿ ಸುರಿದ ಮಳೆ ನಗದದಲ್ಲಿ ಎಂದಿನ ಮಳೆಗಾಲದ ಅವಾಂತರವನ್ನು ಸೃಷ್ಟಿಸಿದೆ. ನಗರದ ಚಾಮರಾಜಪೇಟೆಯ ಜೆಜೆಅರ್ ನಗರದಲ್ಲಿರುವ ಮನೆಗಳಿಗೆ ಕೊಳಚೆ ನೀರು (sewage) ನುಗ್ಗಿದೆ. ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಬಿನ್ನಿ ಮಿಲ್ ಮುಖ್ಯರಸ್ತೆಯಲ್ಲಿರುವ ಸಲಾರ್ಪುರಿಯ ಸತ್ವ ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್ ಸಂಕೀರ್ಣದಿಂದ ಕೊಳಚೆ ನೀರು ಹರಿದು ಬಂದು ಹೊರಭಾಗದಲ್ಲಿರುವ ಮನೆಗಳೊಳಗೆ ಹರಿದಿದೆ. ಎದುರಾದ ಸಮಸ್ಯೆಯಿಂದ ರೊಚ್ಚಿಗೆದ್ದ ನಿವಾಸಿಗಳು ಅಪಾರ್ಟ್ ಮೆಂಟ್ ಮುಂದೆ ಕೂತು ಪ್ರತಿಭಟನೆ ನಡೆಸುತ್ತಿರವುದನ್ನು ದೃಶ್ಯಗಳಲ್ಲಿ ನೋಡಬಹುದು. ಮಳೆಗಾಲ ಶುರುವಾಗಲು ಇನ್ನೂ ಒಂದು ತಿಂಗಳು ಬಾಕಿಯಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಗರದ ಸೆಲಿಬ್ರಿಟಿಗಳನ್ನು ಕರೆದು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮೀಟಿಂಗ್ ಗಳನ್ನು ನಡೆಸಿ ಸಮಯ ವ್ಯರ್ಥ ಮಾಡುವ ಬದಲು ನಗರದ ಮೂಲಭೂತ ಸೌಕರ್ಯಗಳ ಕಡೆ ಕೂಡಲೇ ಗಮನ ಹರಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Weather: ಕರ್ನಾಟಕದಾದ್ಯಂತ ಕಡಿಮೆಯಾದ ಅಕಾಲಿಕ ಮಳೆ, ಹೆಚ್ಚಾದ ಚಳಿ, ಒಣಹವೆ ಮುಂದುವರಿಕೆ