ಚಿತ್ರದುರ್ಗ: DRDOದಲ್ಲಿ ಮತ್ತೊಂದು ಯಶಸ್ವಿ ಪ್ರಯೋಗ: ಏನದು?

|

Updated on: Dec 15, 2023 | 5:41 PM

ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಡಿಆರ್​ಡಿಒ (DRDO)ದಲ್ಲಿ ಮತ್ತೊಂದು ಪ್ರಯೋಗ ಯಶಸ್ವಿಯಾಗಿದೆ. ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ಯಿಂದ ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್ ವಿಂಗ್ UAV, ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗವನ್ನು DRDO ಯಶಸ್ವಿಯಾಗಿ ಪ್ರದರ್ಶಿಸಿದೆ.

ಚಿತ್ರದುರ್ಗ, ಡಿ.15: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಡಿಆರ್​ಡಿಒ (DRDO)ದಲ್ಲಿ ಮತ್ತೊಂದು ಪ್ರಯೋಗ ಯಶಸ್ವಿಯಾಗಿದೆ. ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ಯಿಂದ ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್ ವಿಂಗ್ UAV, ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗವನ್ನು DRDO ಯಶಸ್ವಿಯಾಗಿ ಪ್ರದರ್ಶಿಸಿದೆ. ಬಾಲರಹಿತ ಸಂರಚನೆಯಲ್ಲಿರುವ ಡೆಮಾನ್ ಸ್ಟ್ರೇಟರ್ ಹಾರಾಟ ಸಕ್ಸ್​ಸ್ ಕಂಡಿದ್ದು, ಈ ಮೂಲಕ ಫ್ಲೈಯಿಂಗ್ ವಿಂಗ್ ಸಂರಚನೆ(configuration) ನಿಯಂತ್ರಣವನ್ನ ಕರಗತ ಮಾಡಿಕೊಂಡ ದೇಶಗಳ ಕ್ಲಬ್‌ಗೆ ಭಾರತವು ಸೇರ್ಪಡೆಯಾಗಿದೆ. ಈ ಕುರಿತು ಟ್ವೀಟರ್ ಮೂಲಕ ಡಿಆರ್ ಡಿಓ ಮಾಹಿತಿ ಹಂಚಿಕೊಂಡಿದೆ.

 

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ