ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಯಕರ್ತರೊಬ್ಬರ ನವವಿವಾಹಿತ ಮಗನಿಗೆ ಚಿನ್ನದ ಉಂಗುರ ತೊಡಿಸಿದ ಸಚಿವ ಜಮೀರ್ ಅಹ್ಮದ್

ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಯಕರ್ತರೊಬ್ಬರ ನವವಿವಾಹಿತ ಮಗನಿಗೆ ಚಿನ್ನದ ಉಂಗುರ ತೊಡಿಸಿದ ಸಚಿವ ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2023 | 6:43 PM

ಪಾಟೀಲ್ ಇತ್ತೀಚಿಗೆ ತಮ್ಮ ಮಗ ಅರ್ಜುನ್ ಮದುವೆ ಕಾರ್ಯ ನೆರವೇರಿಸಿದ್ದರು. ಜಮೀರ್ ಅವರಿಗೆ ಲಗ್ನದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲವಂತೆ. ಹಾಗಾಗಿ, ಇಂದು ಪಾಟೀಲ್ ಮನೆಗೆ ಭೇಟಿ ನೀಡಿ ನವವಿವಾಹಿತರಿಗೆ ಶುಭ ಹಾರೈಸುವುದರ ಜೊತೆಗೆ ವರನಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹುಬ್ಬಳ್ಳಿ: ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಎಷ್ಟೇ ವಿವಾದಾತ್ಮಕ ವ್ಯಕ್ತಿಯಾಗಿದ್ದರೂ ಉದಾರಿ, ಪರೋಪಕಾರಿ (benevolent) ಮತ್ತು ವಿಶಾಲಹೃದಯಿ. ವಿರೋಧ ಪಕ್ಷಗಳ ಸದಸ್ಯರು ಇದನ್ನು ಅಂಗೀಕರಿಸುತ್ತಾರೆ. ಬೆಳಗ್ಗೆ ಬೆಳಗಾವಿ ಅಧಿವೇಶನದಲ್ಲಿದ್ದ (Belagavi Assembly Session) ಸಚಿವರು ಮಧ್ಯಾಹ್ನ ಹುಬ್ಬಳ್ಳಿಯಲ್ಲಿದ್ದರು. ಟಿವಿ9 ಹುಬ್ಬಳ್ಳಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಹುಬ್ಬಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಅವರ ಮನೆ ಇದು. ಪಾಟೀಲ್ ಇತ್ತೀಚಿಗೆ ತಮ್ಮ ಮಗ ಅರ್ಜುನ್ ಮದುವೆ ಕಾರ್ಯ ನೆರವೇರಿಸಿದ್ದರು. ಜಮೀರ್ ಅವರಿಗೆ ಲಗ್ನದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲವಂತೆ. ಹಾಗಾಗಿ, ಇಂದು ಪಾಟೀಲ್ ಮನೆಗೆ ಭೇಟಿ ನೀಡಿ ನವವಿವಾಹಿತರಿಗೆ ಶುಭ ಹಾರೈಸುವುದರ ಜೊತೆಗೆ ವರನಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಉದಾರಿ ಅನ್ನುತ್ತಿದ್ದೇವೆ ಅಂತ ಭಾವಿಸಬೇಡಿ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನೊಬ್ಬನ ಪಾಲಕರು ಜಮೀರ್ ಅವರನ್ನು ಭೇಟಿಯಾಗಿ ಆಪರೇಶನ್ ಗಾಗಿ ನೆರವು ಯಾಚಿಸಿದಾಗ ಅವರು ಜೇಬಿಂದ ನೋಟುಗಳನ್ನು ತೆಗೆದುಕೊಟ್ಟರಂತೆ. ಆ ದೃಶ್ಯಗಳು ಈ ವಿಡಿಯೋದಲ್ಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ