ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಮಿನಿಬಸ್-ಲಾರಿ ನಡುವೆ ಅಪಘಾತ, 7-8 ಜನರಿಗೆ ಗಾಯ

ಅರುಣ್​ ಕುಮಾರ್​ ಬೆಳ್ಳಿ

Updated on: Apr 10, 2025 | 10:13 AM

ಮಿನಿಬಸ್ ಜಖಂಗೊಂಡಿರುವ ರೀತಿ ನೋಡಿದರೆ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿರಬಹುದು ಅಂತ ಅನಿಸುತ್ತದೆ. ಅಪಘಾತದಿಂದಾಗಿ ಸ್ಥಳದಲ್ಲಿ ಕೆಲ ಹೊತ್ತಿನವರೆಗೆ ವಾಹನಗಳ ಸಂಚಾರ ಪ್ರಭಾವಕ್ಕೊಳಗಾಗಿತ್ತು. ಸ್ಥಳೀಯರು ಜೆಸಿಬಿ ಒಂದನ್ನು ತರಿಸಿ ಲಾರಿಗೆ ಸಿಕ್ಹಾಕಿಕೊಂಡಿದ್ದ ಮಿನಿಬಸ್ಸನ್ನು ಬೇರ್ಪಡಿಸಿದರು. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ, ಏಪ್ರಿಲ್ 10: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಪಾಳ್ಯ ಗೇಟ್ (Kannamangala Gate) ಬಳಿ ಇಂದು ಬೆಳ್ಳಂಬೆಳಗ್ಗೆಯೇ ಅಪಘಾತ ಜರುಗಿದೆ. ಅದೃಷ್ಟವಶಾತ್ ಈ ರಸ್ತೆ ಅಪಘಾತಕ್ಕೆ ಯಾರೂ ಬಲಿಯಾಗಿಲ್ಲವಾದರೂ ಮಿನಿಬಸ್ ಚಾಲಕ ಬಹಳ ಗಂಭೀರವಾಗಿ ಗಾಯಗೊಂಡಿದ್ದಾನೆ ಮತ್ತು ಲಭ್ಯವಾಗಿರುವ ಮಾಹಿತಿ ಪ್ರಕಾರ ಅವನ ಬಲಗಾಲು ಫ್ರ್ಯಾಕ್ಚರ್ ಆಗಿದೆ. ತನ್ನ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಓವರ್​ಟೇಕ್ ಮಾಡುವ ಭರದಲ್ಲಿ, ಮಿನಿಬಸ್​​ ಡ್ರೈವರ್ ಅದಕ್ಕೆ ಗುದ್ದಿದ್ದಾನೆ. ಬಸ್ಸಲ್ಲಿದ್ದ ಇತರ ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ:  ರಾಜ್ಯದ ವಿವಿಧೆಡೆ ರಸ್ತೆ ಅಪಘಾತ: 5 ಮಂದಿ ಬೈಕ್​ ಸವಾರರ ಸಾವು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.