Dangerous travel: ಉಡುಪಿ ಬಳಿಯ ಹೆದ್ದಾರಿಯಲ್ಲಿ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಚಲಿಸಿದ ಕ್ರೂಸರ್ ಬಾಗಲಕೋಟೆಯದ್ದೇ?
ಈ ವಾಹನ ಎಲ್ಲಿಂದಾದರೂ ಹೊರಟಿರಲಿ; ರಸ್ತೆಯಲ್ಲಿ ಚೆಕ್ ಪೋಸ್ಟ್ ಅಗಲಿ, ಅಥವಾ ಪೊಲೀಸರಾಗಲಿ ಸಿಗಲೇ ಇಲ್ಲವೇ?
ಉಡುಪಿ: ಇಂಥ ದೃಶ್ಯಗಳು ಕೇವಲ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮಾತ್ರ ಕಾಣಿಸುತ್ತವೆ ಅಂತ ಯಾರಾದರೂ ಅಂದುಕೊಂಡರೆ ಅವರ ಊಹೆ ತಪ್ಪು. ಆಫ್ ಕೋರ್ಸ್, ವಿಡಿಯೋದಲ್ಲಿ ಕಾಣುತ್ತಿರುವ ವಾಹನ ಉತ್ತರ ಕರ್ನಾಟಕದ್ದೇ, ಬಾಗಲಕೋಟೆ ಅರ್ ಟಿಓ (Bagalkot RTO) ಪಾಸಿಂಗ್ ನಂಬರ್ (ಕೆಎ 29) ನಿಚ್ಚಳವಾಗಿ ಕಾಣುತ್ತದೆ. ಆದರೆ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಚಲಿಸುತ್ತಿರುವ ಕ್ರೂಸರ್ ವಾಹನ ಉಡುಪಿ ಜಿಲ್ಲೆ ಮೂಲಕ ಹಾದುಹೋಗುವ ಮುಳೂರು ಹೆದ್ದಾರಿಯಲ್ಲಿ (Mulur highway) ಅಪಾಯಕಾರಿಯಾಗಿ ಸಾಗುತ್ತಿದೆ. ಒಂದು ಪಕ್ಷ ಇದು ಬಾಗಲಕೋಟೆಯಿಂದಲೇ ಹೊರಟಿದ್ದರೆ ಇಷ್ಟು ದೂರದವರೆಗೆ ಜನ ಹೀಗೆ ನೇತಾಡಿಕೊಂಡೇ ಪ್ರಯಾಣಿಸಿದರೇ. ಪೂರ್ತಿ ಹಿಂದಿನವನನ್ನು ನೋಡಿ, ಸ್ಟೆಪ್ನಿ ಮೇಲೆ ಓಲಾಡುತ್ತಾ ಕೂತಿದ್ದಾನೆ! ಸೋಜಿಗ ಹುಟ್ಟಿಸುವ ಸಂಗತಿಯೇನೆಂದರೆ, ಈ ವಾಹನ ಎಲ್ಲಿಂದಾದರೂ ಹೊರಟಿರಲಿ; ರಸ್ತೆಯಲ್ಲಿ ಚೆಕ್ ಪೋಸ್ಟ್ ಅಗಲಿ, ಅಥವಾ ಪೊಲೀಸರಾಗಲಿ ಸಿಗಲೇ ಇಲ್ಲವೇ? ಅಂದಹಾಗೆ, ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ