‘ಬಿಗ್ ಬಾಸ್ ಬಾಗಿಲು ತೆಗೆಯಿರಿ’; ತಂದೆ-ತಾಯಿ ನೋಡಿ ಗಳಗಳನೆ ಅತ್ತ ಪ್ರತಾಪ್

Updated on: Dec 28, 2023 | 8:54 AM

ಬಿಗ್ ಬಾಸ್​ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಈ ವೇಳೆ ಕುಟುಂಬದವರು ಬಂದಿದ್ದಾರೆ. ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ. ಈ ವೇಳೆ ಡೋರ್ ಲಾಕ್ ಆಗಿತ್ತು. ಪ್ರತಾಪ್ ಅವರು ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರು ಹಲವು ವರ್ಷಗಳಿಂದ ತಂದೆ-ತಾಯಿ ಜೊತೆ ಮಾತನಾಡಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಅಪ್ಪ ಹಾಗೂ ಅಮ್ಮನ ಜೊತೆ ಮಾತನಾಡಲೇಬೇಕು ಎಂದುಕೊಂಡಿದ್ದರು. ಆ ಆಸೆ ಈಗ ನೆರವೇರಿದೆ. ಬಿಗ್ ಬಾಸ್​ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಈ ವೇಳೆ ಕುಟುಂಬದವರು ಬಂದಿದ್ದಾರೆ. ಪ್ರತಾಪ್ (Prathap) ಅವರ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ. ಈ ವೇಳೆ ಡೋರ್ ಲಾಕ್ ಆಗಿತ್ತು. ಪ್ರತಾಪ್ ಅವರು ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ. ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’ ಎಂದು ಅತ್ತಿದ್ದಾರೆ. ತಂದೆ-ಮಗನ ಸಮಾಗಮ ನೋಡಲು ವೀಕ್ಷಕರು ಕಾದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More