Video: ಜಗಳವಾಡಿ ಹೊರಟ ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್ಫಾರ್ಮ್ಗೆ ಬಂದ ಪತಿ
ಜಗಳವಾಡಿ ಮನೆಯಿಂದ ಹೊರಟ ಪತ್ನಿಯನ್ನು ಅರಸಿ ಪತಿಯೊಬ್ಬ ರೈಲ್ವೆ ಪ್ಲಾಟ್ಫಾರ್ಮ್ಗೆ ಕಾರು ಓಡಿಸಿಕೊಂಡು ಬಂದಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ಆತ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಬ್ ಇನ್ಸ್ಪಟೆಕ್ಟರ್ ರವೀಂದ್ರ ಸಿಂಗ್ ರಾಜಾವತ್ ತಮ್ಮ ತಂಡದೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಗಸ್ತು ತಿರುಗುತ್ತಿರುವ ವೇಳೆ ಝಾನ್ಸಿ ಕಡೆಯಿಂದ ಕಾರೊಂದು ಪ್ಲಾಟ್ಫಾರ್ಮ್ ಕಡೆಗೆ ಚಲಿಸುತ್ತಿದ್ದ ಬಿಳಿ ಕಾರನ್ನು ಗಮನಿಸಿದ್ದಾರೆ.ಕೂಡಲೇ ಕಾರನ್ನು ತಡೆದು ವಿಚಾರಿಸಿದ್ದಾರೆ.
ಗ್ವಾಲಿಯರ್, ಜುಲೈ 11: ಜಗಳವಾಡಿ ಮನೆಯಿಂದ ಹೊರಟ ಪತ್ನಿಯನ್ನು ಅರಸಿ ಪತಿಯೊಬ್ಬ ರೈಲ್ವೆ ಪ್ಲಾಟ್ಫಾರ್ಮ್ಗೆ ಕಾರು ಓಡಿಸಿಕೊಂಡು ಬಂದಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ಆತ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಬ್ ಇನ್ಸ್ಪಟೆಕ್ಟರ್ ರವೀಂದ್ರ ಸಿಂಗ್ ರಾಜಾವತ್ ತಮ್ಮ ತಂಡದೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಗಸ್ತು ತಿರುಗುತ್ತಿರುವ ವೇಳೆ ಝಾನ್ಸಿ ಕಡೆಯಿಂದ ಕಾರೊಂದು ಪ್ಲಾಟ್ಫಾರ್ಮ್ ಕಡೆಗೆ ಚಲಿಸುತ್ತಿದ್ದ ಬಿಳಿ ಕಾರನ್ನು ಗಮನಿಸಿದ್ದಾರೆ.ಕೂಡಲೇ ಕಾರನ್ನು ತಡೆದು ವಿಚಾರಿಸಿದ್ದಾರೆ.
ನಿತಿನ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾಗಿ ಹೇಳಿದ್ದಾರೆ. ನಂತರ ಆಕೆ ಮನೆ ಬಿಟ್ಟು ಹೋಗಿದ್ದಾಳೆ. ಆಕೆಯನ್ನು ಹುಡುಕುತ್ತಾ ಅಲ್ಲಿಗೆ ಬಂದಿದ್ದಾಗಿ ತಿಳಿಸಿದ್ದಾರೆ. ಕೂಡಲೇ ನಿತಿನ್ ಅವರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಗೆ ಏನೇ ಸಮಸ್ಯೆ ಇರಲಿ, ಆದರೆ ಪ್ಲಾಟ್ಫಾರ್ಮ್ ಮೇಲೆ ಕಾರು ತರುವುದು ತಪ್ಪು ಝಾನ್ಸಿ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ