ಕೋರಮಂಗಲ ಡ್ರಂಕನ್ ಡ್ಯಾಡ್ ಪಬ್ ಮುಂದೆ ಕುಡಿತದ ಅಮಲಿನಲ್ಲಿ ಡ್ರಂಕ್ ಡಾಟರ್ ಗಳ ರಂಪಾಟ

|

Updated on: Oct 20, 2023 | 6:41 PM

ಕುಡಿಯುವುದು ಅವರ ವೈಯಕ್ತಿಕ ವಿಚಾರ, ಸರಿ ತಪ್ಪು ಅಂತ ಯಾರೂ ಹೇಳಲಾಗದು. ಆದರೆ ಇಂಥ ಸ್ಥಿತಿಯಲ್ಲಿರುವ ಯುವತಿಯರೊಂದಿಗೆ ದುಷ್ಕರ್ಮಿಗಳು ಕೆಟ್ಟ ವರ್ತನೆ ನಡೆಸಿದರೆ ಅದಕ್ಕ್ಯಾರು ಹೊಣೆ? ಮನೆಗೆ ಡ್ರಾಪ್ ಮಾಡ್ತೀವಿ ಅಂತ ವಾಹನಗಳಲ್ಲಿ ಕರೆದೊಯ್ಯುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು

ಬೆಂಗಳೂರು: ನಗರದ ಪಾಶ್ ವಾಣಿಜ್ಯ ಏರಿಯಾ ಅನಿಸಿಕೊಂಡಿರುವ ಕೋರಮಂಗಲ ಡ್ರಂಕನ್ ಡ್ಯಾಡ್ ಹೆಸರಿನ ಪಬ್ ಮುಂದೆ ನಿನ್ನೆ ತಡರಾತ್ರಿ ಕಂಡುಬಂದ ದೃಶ್ಯವಿದು-ಡ್ರಂಕನ್ ಡ್ಯಾಡ್ ಪಬ್ ಮುಂದೆ ಡ್ರಂಕ್ ಡಾಟರ್ಸ್! ಕುಡಿತದ ಅಮಲಿನಲ್ಲಿ ರಸ್ತೆಗಿಳಿದ ಕೆಲ ಯುವತಿಯರು ರಂಪಾಟ ನಡೆಸಿದರು ಅನ್ನೋದಕ್ಕಿಂತ ರಸ್ತೆಯಲ್ಲಿದ್ದ ಜನರಿಗೆ ಪುಕ್ಕಟೆ ಮನರಂಜನೆ (free entertainment) ಒದಗಿಸಿದರು ಅಂತ ಹೇಳೋದು ಹೆಚ್ಚು ಸೂಕ್ತ ಮಾರಾಯ್ರೇ. ಅವರ ಕೂಗಾಟ, ಚೀರಾಟ ಗಮನಿಸಿ. ಒಬ್ಬಳಂತೂ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ (bonnet) ಮೇಲೆ ಕುಳಿತು ಕೂಗಾಡುತ್ತಾಳೆ. ರಸ್ತೆಯಲ್ಲಿ ತಿರುಗಾಡುತ್ತಿದ್ದ ಸಾರ್ವಜನಿಕರೊಂದಿಗೆ ಸುಖಾ ಸುಮ್ಮನೆ ಜಗಳ ಮಾಡಿದ್ದಾರೆ. ಇವರ ಕಿರಿಕಿರಿ ತಾಳಲಾಗಾದೆ ಯಾರೋ ಒಂದಿಬ್ಬರು ಕೋರಮಂಗಲ ಪೊಲೀಸ್ ಠಾಣೆಗೆ (Koramangala police station) ತೆರಳಿ ವಿಷಯ ತಿಳಿಸಿದ್ದಾರೆ. ಪೊಲೀಸರು ಯುವತಿಯರನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಕುಡಿಯುವುದು ಅವರ ವೈಯಕ್ತಿಕ ವಿಚಾರ, ಸರಿ ತಪ್ಪು ಅಂತ ಯಾರೂ ಹೇಳಲಾಗದು. ಆದರೆ ಇಂಥ ಸ್ಥಿತಿಯಲ್ಲಿರುವ ಯುವತಿಯರೊಂದಿಗೆ ದುಷ್ಕರ್ಮಿಗಳು ಕೆಟ್ಟ ವರ್ತನೆ ನಡೆಸಿದರೆ ಅದಕ್ಕ್ಯಾರು ಹೊಣೆ? ಮನೆಗೆ ಡ್ರಾಪ್ ಮಾಡ್ತೀವಿ ಅಂತ ವಾಹನಗಳಲ್ಲಿ ಕರೆದೊಯ್ಯುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ