Drunk and Drive case: ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಓಡಿಸಿದ ಯುವತಿ ಡಿವೈಡರ್ ಗೆ ಗುದ್ದಿದರೂ ಕಾರಲ್ಲಿದ್ದವರು ಸುರಕ್ಷಿತ!
ಆದರೆ, ಕುಡಿತದ ಮತ್ತಿನಲ್ಲಿ ಕಾರು ಓಡಿಸುವಾಗ ಏನಾದರೂ ಹೆಚ್ಚುಕಡಿಮೆಯಾದರೆ ಏನು ಗತಿ?
ಬೆಂಗಳೂರು: ವೀಕೆಂಡ್ ಮೋಜು ಮಸ್ತಿಯೇ ಹಾಗೆ ಸ್ವಾಮಿ, ಮದ್ಯದ ಅಮಲಿನಲ್ಲಿ ಕಾರು ಬೈಕ್ ಗಳನ್ನು ಓಡಿಸುವವರು ಸರಹೊತ್ತಲ್ಲಿ ಆಪಘಾತಗಳನ್ನು ನಡೆಸಿ ತಮ್ಮ ಜೊತೆ ಬೇರೆಯವ ಪ್ರಾಣಗಳನ್ನೂ ಅಪಾಯಕ್ಕೊಡ್ಡುತ್ತಾರೆ. ರವಿವಾರ ಅಪರಾತ್ರಿಯಲ್ಲಿ ಪಶ್ಚಿಮ ಬಂಗಾಳ ನೋಂದಣಿಯ (West Bengal registration) ಕೆಂಪುಕಾರು ನಗರದ ಆಡುಗೋಡಿಯಲ್ಲಿರುವ ಆರ್ ಟಿ ಒ ಕಚೇರಿ (RTO) ಬಳಿ ಡಿವೈಡರ್ ಗೆ ಗುದ್ದಿದೆ. ಪ್ರಾಯಶಃ ಅಪಘಾತ ನಡೆದ ಸ್ಥಳದಲ್ಲಿ ಜನರೊಂದಿಗೆ ವಾದ ಮಾಡುತ್ತಿರುವ ಯುವತಿಯೇ ಅಪಾಯಕಾರಿಯಾಗಿ, ಹೆಚ್ಚಿನ ವೇಗದಲ್ಲಿ ಕಾರು ಓಡಿಸುತ್ತಿದ್ದರು ಅನಿಸುತ್ತೆ. ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸುವ ಟ್ರಾಫಿಕ್ ಪೊಲೀಸ್ ನೊಂದಿಗೂ ಯುವತಿ ವಾದ ಮಾಡುತ್ತಾರೆ. ಮದ್ಯಪಾನ (alcohol consumption) ಅವರವರ ವೈಯಕ್ತಿಕ ವಿವೇಚನೆಗೆ ಬಿಟ್ಟಿದ್ದು ಅದನ್ನು ನಾವ್ಯಾರೂ ಪ್ರಶ್ನಿಸಲಾರೆವು. ಆದರೆ, ಕುಡಿತದ ಮತ್ತಿನಲ್ಲಿ ಕಾರು ಓಡಿಸುವಾಗ ಏನಾದರೂ ಹೆಚ್ಚುಕಡಿಮೆಯಾದರೆ ಏನು ಗತಿ? ಡಿವೈಡರ್ ಯುವತಿ ಯಾವುದಾದರೂ ವಾಹನಕ್ಕೆ ಅಥವಾ ಅಲ್ಲಿ ನೆರೆದವರು ಹೇಳುತ್ತಿರುವಂತೆ ಫುಡ್ ಡೆಲಿವರಿ ಬಾಯ್ ಗಳಿಗೆ ಗುದ್ದಿ ಅನಾಹುತವಾದರೆ ಅವರನ್ನು ನಂಬಿಕೊಂಡ ಕುಟುಂಬಗಳು ಅನುಭವಿಸಬಹುದಾದ ಕಷ್ಟವನ್ನು ಒಮ್ಮೆ ಯೋಚಿಸಿ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ