Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!

Updated on: Jul 13, 2026 | 10:54 AM

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ, ದೂದ್ ಸಾಗರದ ರುದ್ರರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಬೆಳಗಾವಿ, ಜುಲೈ 13: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ, ದೂದ್ ಸಾಗರದ ರುದ್ರರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More