ತಾಂತ್ರಿಕ ದೋಷ, ಕೋಲಾರ ಕೆರೆಯಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್; ಕೆಟ್ಟು ನಿಂತ ಸೇನಾ ಹೆಲಿಕಾಪ್ಟರ್ ನೋಡಲು ಜನವೋ ಜನ

Edited By: ಆಯೇಷಾ ಬಾನು

Updated on: Sep 30, 2024 | 9:04 AM

ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿತ್ತು. ಆದರೆ ಈಗ 14 ಗಂಟೆಯಾದರೂ ತಾಂತ್ರಿಕ‌‌ ಸಮಸ್ಯೆ ಸರಿ ಮಾಡಲಾಗಿಲ್ಲ. ಕೆಟ್ಟು ನಿಂತ ಸೇನಾ ಹೆಲಿಕಾಪ್ಟರ್ ನೋಡಲು ತಂಡೋಪ‌ತಂಡವಾಗಿ ಜನರು ಆಗಮಿಸುತ್ತಿದ್ದಾರೆ.

ಕೋಲಾರ, ಸೆ.30: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕರಪನಹಳ್ಳಿ ಕೆರೆ ಬಳಿ ಕಳೆದ 14 ಗಂಟೆಗಳಿಂದ ಸೇನಾ ಹೆಲಿಕಾಪ್ಟರ್ ಒಂದು ಬಂದು ನಿಂತಿದೆ. ಹೆಲಿಕಾಪ್ಟರ್ ನೋಡಲು ತಂಡೋಪ‌ತಂಡವಾಗಿ ಜನರು ಆಗಮಿಸುತ್ತಿದ್ದಾರೆ. ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿತ್ತು. ಆದರೆ ಈಗ 14 ಗಂಟೆಯಾದರೂ ತಾಂತ್ರಿಕ‌‌ ಸಮಸ್ಯೆ ಸರಿ ಮಾಡಲಾಗಿಲ್ಲ. ಸೇನಾ ಹೆಲಿಕಾಪ್ಟರ್ ರಾತ್ರಿಯಿಡಿ ಕೆರೆಯಲ್ಲೆ ಇದೆ. ಸದ್ಯ ಅಧಿಕಾರಿಗಳು ಹೆಲಿಕಾಪ್ಟರ್​ಗೆ ಟಾರ್ಪಲ್ ಹೊದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ತಾಂತ್ರಿಕ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Sep 30, 2024 09:02 AM
Loading...
Unable to load recommendations.
Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More