‘ಭೀಮ’ ಬೆಳಿಗಿನ ಶೋ ಹಾಕದ್ದಕ್ಕೆ ದುನಿಯಾ ವಿಜಿ ಅಭಿಮಾನಿಗಳ ದಾಂಧಲೆ

Updated on: Aug 09, 2024 | 7:26 PM

Duniya Vijay: ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಅರ್ಲಿ ಮಾರ್ನಿಂಗ್ ಶೋ ರಾಜ್ಯದೆಲ್ಲೆಡೆ ಕ್ಯಾನ್ಸಲ್ ಆಗಿದೆ. ಆದರೆ ಹೊಸಪೇಟೆಯಲ್ಲಿ ವಿಜಿ ಅಭಿಮಾನಿಗಳು, ಮಾರ್ನಿಂಗ್ ಶೋ ಪ್ರದರ್ಶಿಸದ ಚಿತ್ರಮಂದಿರದ ಮುಂದೆ ದಾಂಧಲೆ ನಡೆಸಿದರು.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ರಾಜ್ಯದಾದ್ಯಂತ ಇಂದು (ಆಗಸ್ಟ್ 09) ಬಿಡುಗಡೆ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಶೋ ಪ್ರದರ್ಶನಗೊಳ್ಳಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ನಿನ್ನೆ ಹಠಾತ್ತನೆ ಎಲ್ಲ ಬೆಳಿಗಿನ ಶೋಗಳನ್ನು ರದ್ದು ಮಾಡಿ, 9:30, 10 ಗಂಟೆ ಮೇಲಷ್ಟೆ ಶೋಗಳನ್ನು ಪ್ರದರ್ಶಿಸಲಾಯ್ತು. ಆದರೆ ಹಲವು ನಗರಗಳಲ್ಲಿ ‘ಭೀಮ’ ಸಿನಿಮಾ ನೋಡಲು ದುನಿಯಾ ವಿಜಿ ಅಭಿಮಾನಿಗಳು ಬೆಳ್ಳಂಬೆಳಿಗ್ಗೆ ಚಿತ್ರಮಂದಿರಗಳ ಬಳಿ ಆಗಮಿಸಿದ್ದರು. ಹೊಸಪೇಟೆ ನಗರದಲ್ಲಿ ‘ಭೀಮ’ ಸಿನಿಮಾದ ಬೆಳಿಗಿನ ಶೋ ಪ್ರದರ್ಶನ ಮಾಡದೇ ಇದ್ದುದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಗೇಟ್ ಅನ್ನು ಕಿತ್ತೊಗೆಯುವ ಪ್ರಯತ್ನ ಮಾಡಿದರು. ಆ ಬಳಿಕ ಗೇಟ್​ಗೆ ಹಾಕಿದ್ದ ಬೀಗವನ್ನು ಒಡೆದು ಒಳನುಗ್ಗಿದರು. ಘಟನೆಯ ವಿಡಿಯೋ ಇಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More