Duplicate Charger: ನಿಮ್ಮ ಮೊಬೈಲ್ ಚಾರ್ಜರ್ ನಕಲಿಯೇ? ಅಸಲಿಯೇ? ಹೀಗೆ ಚೆಕ್ ಮಾಡಿ

Duplicate Charger: ನಿಮ್ಮ ಮೊಬೈಲ್ ಚಾರ್ಜರ್ ನಕಲಿಯೇ? ಅಸಲಿಯೇ? ಹೀಗೆ ಚೆಕ್ ಮಾಡಿ

ಕಿರಣ್​ ಐಜಿ
|

Updated on: Feb 21, 2024 | 7:47 AM

ಮೊಬೈಲ್ ತಯಾರಿಕಾ ಕಂಪನಿಗಳು, ಕಂಪನಿ ಶಿಫಾರಸು ಮಾಡಿದ ಚಾರ್ಜರ್ ಅನ್ನೇ ಬಳಸುವಂತೆ ಸಲಹೆ ನೀಡುತ್ತವೆ. ಜತೆಗೆ ಮೊಬೈಲ್​ಗೆ ನಿಗದಿಪಡಿಸಿದ ಮಿತಿಯ ಚಾರ್ಜರ್ ಬಳಸುವುದು ಹೆಚ್ಚು ಸುರಕ್ಷಿತವೂ ಹೌದು. ಒರಿಜಿನಲ್ ಚಾರ್ಜರ್ ಕಳೆದುಹೋದರೆ ಮತ್ತೊಂದು ಚಾರ್ಜರ್ ಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮಾಡಬೇಕಿರುವುದೇನು? ನಕಲಿ ಚಾರ್ಜರ್ ಪತ್ತೆಹಚ್ಚುವುದು ಹೇಗೆ?

ಚಾರ್ಜರ್ ಇಲ್ಲದೆ ಮೊಬೈಲ್ ಕೆಲಸ ಮಾಡುವುದಿಲ್ಲ. ಅದರಲ್ಲೂ ಇಂದು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಏಕರೂಪದ ಯುಎಸ್​ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇರುವ ಸ್ಮಾರ್ಟ್​ಫೋನ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗಿವೆ. ಹೀಗಿರುವಾಗ ಫೋನ್ ಚಾರ್ಜ್ ಮಾಡಲು ಕೆಲವೊಮ್ಮೆ ನಮ್ಮದಲ್ಲದ ಚಾರ್ಜರ್ ಬಿಟ್ಟು, ಬೇರಾವುದೋ ಚಾರ್ಜರ್ ಉಪಯೋಗಿಸಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಅದು ಅನಿವಾರ್ಯವೂ ಆಗಿರುತ್ತದೆ. ಆದರೆ ಮೊಬೈಲ್ ತಯಾರಿಕಾ ಕಂಪನಿಗಳು, ಕಂಪನಿ ಶಿಫಾರಸು ಮಾಡಿದ ಚಾರ್ಜರ್ ಅನ್ನೇ ಬಳಸುವಂತೆ ಸಲಹೆ ನೀಡುತ್ತವೆ. ಜತೆಗೆ ಮೊಬೈಲ್​ಗೆ ನಿಗದಿಪಡಿಸಿದ ಮಿತಿಯ ಚಾರ್ಜರ್ ಬಳಸುವುದು ಹೆಚ್ಚು ಸುರಕ್ಷಿತವೂ ಹೌದು. ಒರಿಜಿನಲ್ ಚಾರ್ಜರ್ ಕಳೆದುಹೋದರೆ ಮತ್ತೊಂದು ಚಾರ್ಜರ್ ಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮಾಡಬೇಕಿರುವುದೇನು? ನಕಲಿ ಚಾರ್ಜರ್ ಪತ್ತೆಹಚ್ಚುವುದು ಹೇಗೆ?