ಕೇರಳದಲ್ಲಿ ಆನೆ ತುಳಿತಕ್ಕೆ ಬಲಿಯಾದವನಿಗೆ ರೂ. 15 ಲಕ್ಷ, ಬರದಿಂದ ತತ್ತರಿಸಿರುವ ರಾಜ್ಯದ ರೈತನಿಗೆ ರೂ. 2,000! ಹೆಚ್ ಡಿ ಕುಮಾರಸ್ವಾಮಿ
ರಾಜ್ಯದಲ್ಲಿ ಯಾರಾದರೂ ವನ್ಯಜೀವಿಗಳ ದಾಳಿಗೆ ಬಲಿಯಾದರೆ ರಾಜ್ಯ ಸರ್ಕಾರ 25,000, 50,000, ಗರಿಷ್ಠ ರೂ. 5 ಲಕ್ಷದವರೆಗೆ ಪರಿಹಾರ ನೀಡುತ್ತದೆ. ಮಾನವೀಯತೆಯ ಹೆಸರಲ್ಲಿ ಮತ್ತು 5 ಗ್ಯಾರಂಟಿಗಳ ನೆಪದಲ್ಲಿ ಸಿದ್ದರಾಮಯ್ಯ ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಕೇರಳದಲ್ಲಿ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯೊಬ್ಬನ ಕುಟುಂಬಕ್ಕೆ ಕರ್ನಾಟಕ ಸರ್ಕಾರ (Government of Karnataka) 15 ಲಕ್ಷ ರೂ. ಪರಿಹಾರ ಕೊಟ್ಟಿರುವುದನ್ನು ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಲವಾಗಿ ಖಂಡಿಸಿದರು. ನಗರದ ತಮ್ಮ ಕಚೇರಿಯಲ್ಲಿ ಇಂದು ಟಿವಿ9 ಕನ್ನಡವಾಹಿನಿ ವರದಿಗಾರನೊಂದಿಗೆ ಮಾತಾಡಿದ ಕುಮಾರಸ್ವಾಮಿ, ನಮ್ನ ತೆರಿಗೆ ನಮ್ಮ ಹಕ್ಕು (MY Tax My Right) ಹೇಳುತ್ತಾ ದೆಹಲಿಗೆ ಹೋಗಿ ನಾಟಕ ಮಾಡುವ ರಾಜ್ಯ ಸರ್ಕಾರ ಕನ್ನಡಿಗರ ತೆರಿಗೆ ಹಣವನ್ನು ಸ್ವೇಚ್ಛೆಯಾಗಿ ಖರ್ಚು ಮಾಡುತ್ತಿದೆ, ದೆಹಲಿಯಲ್ಲಿರುವ ತಮ್ಮ ನಾಯಕರ ಅಣತಿಯಂತೆ ಮತ್ತು ಮುಂಬರುವ ಲೋಕ ಸಭಾ ಚುನಾವನಣೆಯಲ್ಲಿ ವೋಟು ಗಿಟ್ಟಿಸಲು ಹಣ ಖರ್ಚು ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು. ಬರದಿಂದ ತತ್ತರಿಸಿರುವ ರಾಜ್ಯದ ರೈತನಿಗೆ ಸರ್ಕಾರ ಕೇವಲ ರೂ. 2,000 ಅದರಲ್ಲೂ ಶೇಕಡ 75 ಕೇಂದ್ರದ ಹಣ-ನೀಡುತ್ತದೆ, ಮತ್ತು ರಾಜ್ಯದಲ್ಲಿ ಯಾರಾದರೂ ವನ್ಯಜೀವಿಗಳ ದಾಳಿಗೆ ಬಲಿಯಾದರೆ, 25,000, 50,000, ಗರಿಷ್ಠ ರೂ. 5 ಲಕ್ಷದವರೆಗೆ ಪರಿಹಾರ ನೀಡುತ್ತದೆ. ಮಾನವೀಯತೆಯ ಹೆಸರಲ್ಲಿ ಮತ್ತು 5 ಗ್ಯಾರಂಟಿಗಳ ನೆಪದಲ್ಲಿ ಸಿದ್ದರಾಮಯ್ಯ ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

