‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇನಾ..
ಇದು ರೀಲ್ಸ್ ಯುಗ. ಯಾವುದೇ ಸಾಂಗ್ ಹಿಟ್ ಆದರೂ ಅದನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗ ‘ದ್ವಾಪರ..’ ಹಾಡಿನಲ್ಲಿ ಬರುವ ಕೆಲವು ಸಾಲುಗಳು ರೀಲ್ಸ್ನಲ್ಲಿ ಬಳಕೆ ಮಾಡಲಾಗಿದೆ. ಹೀಗಾಗಿ, ಈ ಹಾಡಿನಿಂದ ಸಿನಿಮಾಗೆ ಭರ್ಜರಿ ಮೈಲೇಜ್ ಸಿಕ್ಕಿದೆ.
ಗಣೇಶ್ ನಟನೆಯ ‘ಕೃಷ್ಣ ಪ್ರಣಯ ಸಖಿ’ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಆಗಸ್ಟ್ 15ರಂದು ರಿಲೀಸ್ ಆಗಲಿರೋ ಈ ಸಿನಿಮಾದ ‘ದ್ವಾಪರ..’ ಹಾಡು ಸಖತ್ ಸದ್ದು ಮಾಡುತ್ತಿದೆ. ರೀಲ್ಸ್ ಓಪನ್ ಮಾಡಿದರೆ ಇದೇ ಹಾಡು ಮೊಳಗುತ್ತದೆ. ‘ಜೇನ ದನಿಯೋಳೆ.. ಮೀನ ಕಣ್ಣೋಳೆ.. ಸೊಬಗ ಮೈತುಂಬಿದೆ.. ಎಂದು ಆರಂಭ ಆಗುವ ಸಾಲುಗಳು ಜನರಿಗೆ ಇಷ್ಟ ಆಗಿದೆ. ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಹಾಡಿನ ಬಗ್ಗೆ ನಾಗೇಂದ್ರ ಪ್ರಸಾದ್ ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ಹಾಡಿಗೆ ಎಲ್ಲರ ಕೊಡುಗೆಯೂ ಇರುತ್ತದೆ. ಟ್ಯೂನ್ ಹಾಗಿರೋದಕ್ಕೆ ನಾನು ಆ ಸಾಲನ್ನು ಬರೆಯಲು ಸಾಧ್ಯವಾಯಿತು. ಹೀಗಾಗಿ ಹಾಡಿನ ಯಶಸ್ಸಿಗೆ ಎಲ್ಲರೂ ಕಾರಣ. ಟ್ಯೂನ್ ಕಂಪೋಸ್ ಮಾಡುವಾಗ ನಾನು ಸಾಲುಗಳನ್ನು ಕೊಡುತ್ತಾ ಹೋದೆ. ಈ ರೀತಿಯಲ್ಲಿ ಹಾಡು ಮೂಡಿ ಬಂತು. ಈ ಹಾಡು ಎರಡು ಗಂಟೆಯಲ್ಲಿ ರೆಡಿ ಆಗಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.