ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ

Updated on: Apr 18, 2024 | 8:41 AM

ದ್ವಾರಕೀಶ್ ಅವರು ನಟಿ ಶ್ರುತಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅವರ ಬಗ್ಗೆ ಶ್ರುತಿಗೆ ಅಪಾರ ಗೌರವ ಇದೆ. ದ್ವಾರಕೀಶ್ ಅವರು ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯನ್ನು ಅವರು ಈಡೇರಿಸಿದ್ದಾರೆ. ಅವರ ಕೊನೆಯ ಆಸೆ ಏನಿತ್ತು ಎನ್ನುವ ಬಗ್ಗೆ ಶ್ರುತಿ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ.

ದ್ವಾರಕೀಶ್ ಅವರು ಇಂದು ನಮ್ಮೊಂದಿಗೆ ಇಲ್ಲ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರು ಅನೇಕರನ್ನು ಪರಿಚಯಿಸಿದ್ದರು. ಅವರಿಲ್ಲ ಎನ್ನುವ ನೋವು ಇಂದು-ನಾಳೆಗೆ ಮರೆಯಾಗುವಂಥದ್ದಲ್ಲ. ನಟಿ ಶ್ರುತಿಯನ್ನು ದ್ವಾರಕೀಶ್ (Dwarakish) ಅವರೇ ಪರಿಚಯಿಸಿದ್ದರು. ಅವರ ಬಗ್ಗೆ ಶ್ರುತಿಗೆ ಅಪಾರ ಗೌರವ ಇದೆ. ದ್ವಾರಕೀಶ್ ಅವರು ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯನ್ನು ಅವರು ಈಡೇರಿಸಿದ್ದಾರೆ. ‘ದ್ವಾರಕೀಶ್ ಅಣ್ಣ ತಮ್ಮ ಮಕ್ಕಳಿಗೆ ಬಿಟ್ಟು ಯಾರಿಗಾದರೂ ಹೆಸರು ಇಟ್ಟಿದ್ದಾರೆ ಎಂದರೆ ಅದು ನನಗೆ. ನಿನ್ನ ಹೆಜ್ಜೆ ಒಂದು ಇತಿಹಾಸ ಆಗಬೇಕು ಎಂದು ಹೇಳುತ್ತಿದ್ದರು. ಶೂಟಿಂಗ್ ಜೊತೆಯಲ್ಲಿದ್ದಾಗೆಲ್ಲ ಒಂದು ಆಸೆ ಹೇಳಿಕೊಳ್ಳುತ್ತಿದ್ದರು. ಅದನ್ನು ಈಡೇರಿಸುತ್ತೀಯಾ ಎಂದು ಕೇಳುತ್ತಿದ್ದರು. ನಾನು ಸತ್ತಾಗ ನಾನು ಪರಿಚಯಿಸಿದ ನಟ-ನಟಿಯರು ನನ್ನ ಸುತ್ತು ಅಳಬೇಕು ಎಂದು ಕೇಳಿಕೊಂಡಿದ್ದರು. ನಾನು ಅದನ್ನು ಮಾಡಿದೆ’ ಎಂದು ಗಳಗಳನೆ ಅತ್ತಿದ್ದಾರೆ ಶ್ರುತಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More