ದ್ವಾರಕೀಶ್ ಇಲ್ಲದೆ ಮೂಕ ವೇದನೆ ಅನುಭವಿಸಿದ ಸಾಕು ನಾಯಿ
ದ್ವಾರಕೀಶ್ ಶ್ವಾನವನ್ನು ಪ್ರೀತಿಯಿಂದ ಸಾಕಿದ್ದರು. ಈಗ ಮಾಲೀಕನಿಲ್ಲದೆ ನಾಯಿಗೆ ಬೇಸರ ಆಗಿದೆ. ದ್ವಾರಕೀಶ್ ಶವವನ್ನು ತೆಗೆದುಕೊಂಡು ಹೋಗುವಾಗ ಮನೆಯ ಸಾಕು ನಾಯಿ ಕೂಡ ಮೂಕ ವೇದನೆ ಅನುಭವಿಸುತ್ತಿದೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ಹಾಸ್ಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ (Dwarakish) ನಿಧನ ವಾರ್ತೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ದುಃಖ ತಂದಿದೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಲ್ಲ ಎನ್ನುವ ಬೇಸರಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ದ್ವಾರಕೀಶ್ ಮನೆಯ ಸಾಕು ನಾಯಿ ಕೂಡ ಮೂಕ ವೇದನೆ ಅನುಭವಿಸುತ್ತಿದೆ. ದ್ವಾರಕೀಶ್ ಶವವನ್ನು ತೆಗೆದುಕೊಂಡು ಹೋಗುವಾಗ ಒಂದೇ ಸಮನೆ ಬೊಗಳಿದೆ. ಬೇಸರದಲ್ಲಿ ಕುಳಿತುಕೊಂಡಿದೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ದ್ವಾರಕೀಶ್ ಅವರು ಶ್ವಾನವನ್ನು ಪ್ರೀತಿಯಿಂದ ಸಾಕಿದ್ದರು. ಈಗ ಮಾಲೀಕನಿಲ್ಲದೆ ನಾಯಿಗೆ ಬೇಸರ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ