Kichcha Sudeep: ದ್ವಾರಕೀಶ್ ಅಂತಿಮದರ್ಶನ ಪಡೆದು ಭಾವುಕರಾದ ಕಿಚ್ಚ ಸುದೀಪ್

Kichcha Sudeep: ದ್ವಾರಕೀಶ್ ಅಂತಿಮದರ್ಶನ ಪಡೆದು ಭಾವುಕರಾದ ಕಿಚ್ಚ ಸುದೀಪ್

ರಾಜೇಶ್ ದುಗ್ಗುಮನೆ
|

Updated on: Apr 17, 2024 | 10:22 AM

ದ್ವಾರಕೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟೌನ್​ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಿಚ್ಚ ಸುದೀಪ್ ಕೂಡ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಅವರು ಭಾವುಕರಾದರು. ಸುದೀಪ್ ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ದ್ವಾರಕೀಶ್ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಅವರು ಅಪಾರ ಗೌರವ ಹೊಂದಿದ್ದಾರೆ. ‘ವಿಷ್ಣುವರ್ಧನ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಈಗ ದ್ವಾರಕೀಶ್ ನಮ್ಮ ಬಳಿ ಇಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟೌನ್​ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಮೃತದೇಹವನ್ನು ಇಡಲಾಗಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕಿಚ್ಚ ಸುದೀಪ್ ಕೂಡ ಕಲಾಕ್ಷೇತ್ರಕ್ಕೆ ಆಗಮಿಸಿದ್ದಾರೆ. ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಕಿಚ್ಚ ಸುದೀಪ್ ಅವರು ಸದ್ಯ ‘ಮ್ಯಾಕ್ಸ್’ ಸಿನಿಮಾ ಶೂಟ್​ಗಾಗಿ ತಮಿಳುನಾಡಿನಲ್ಲಿದ್ದಾರೆ. ಚೆನ್ನೈ ಸಮೀಪ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ