‘ಪ್ರೀತಿಗೆ ಮತ್ತೊಂದು ಹೆಸರೇ ದ್ವಾರಕೀಶ್’; ಪತಿಯನ್ನು ನೆನೆದು ಕಣ್ಣೀರು ಹಾಕಿದ ಶೈಲಜಾ

‘ಪ್ರೀತಿಗೆ ಮತ್ತೊಂದು ಹೆಸರೇ ದ್ವಾರಕೀಶ್’; ಪತಿಯನ್ನು ನೆನೆದು ಕಣ್ಣೀರು ಹಾಕಿದ ಶೈಲಜಾ

Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on:Apr 17, 2024 | 9:35 AM

ದ್ವಾರಕೀಶ್ ಇನ್ನಿಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದ್ವಾರಕೀಶ್ ಇಲ್ಲದೆ ಅವರ ಮಕ್ಕಳು ಜೀವನ ನಡೆಸಬೇಕಿದೆ. ದ್ವಾರಕೀಶ್ ನಿಧನವಾರ್ತೆ ವಿಚಾರ ಅವರ ಪತ್ನಿ ಶೈಲಜಾಗೆ ಸಾಕಷ್ಟು ನೋವು ತಂದಿದೆ. ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ. ಪತಿಯನ್ನು ಬಿಟ್ಟು ಇರೋದು ಅವರಿಗೆ ಕಷ್ಟ ಆಗುತ್ತಿದೆ.

ಹಾಸ್ಯ ನಟ ದ್ವಾರಕೀಶ್ (Dwarakish) ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ದ್ವಾರಕೀಶ್ ಇಲ್ಲದೆ ಅವರ ಮಕ್ಕಳು ಜೀವನ ನಡೆಸಬೇಕಿದೆ. ದ್ವಾರಕೀಶ್ ನಿಧನವಾರ್ತೆ ವಿಚಾರ ಅವರ ಪತ್ನಿ ಶೈಲಜಾಗೆ ಸಾಕಷ್ಟು ನೋವು ತಂದಿದೆ. ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ. ‘ಪ್ರೀತಿ ತುಂಬಿದ ಮನೆ ಇದಾಗಿತ್ತು. ಅವರಿಗೆ ಎಲ್ಲರ ಮೇಲೂ ಪ್ರೀತಿ ಇತ್ತು. ಈಗ ಅವರಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರಿನ್ನು ಮರಳಿ ಬರುವುದಿಲ್ಲ’ ಎಂದು ಶೈಲಜಾ ಅವರು ಕಣ್ಣೀರು ಹಾಕಿದ್ದಾರೆ. ಅಂಬುಜಾ ಅವರನ್ನು ದ್ವಾರಕೀಶ್ ಪ್ರೀತಿಸಿ ಮದುವೆ ಆಗಿದ್ದರು. ಆ ಬಳಿಕ ಅವರ ಜೀವನದಲ್ಲಿ ಬಂದಿದ್ದು ಶೈಲಜಾ. ಅಂಬುಜಾ ಅವರು 2021ರಲ್ಲಿ ನಿಧನ ಹೊಂದಿದ್ದರು. ದ್ವಾರಕೀಶ್ ಅವರು ಏಪ್ರಿಲ್ 16ರಂದು ನಿಧನ ಹೊಂದಿದರು. ಇಂದು (ಏಪ್ರಿಲ್ 17) ಅವರ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Apr 17, 2024 09:32 AM