‘ಎರಡನೇ ಮದುವೆ ಆಗಬಾರದಿತ್ತು’; ನಿರ್ಧಾರದ ಬಗ್ಗೆ ಮರುಗಿದ್ದ ದ್ವಾರಕೀಶ್

ದ್ವಾರಕೀಶ್ ಮೊದಲ ಪತ್ನಿ ಅಂಬುಜಾ ಎಂಎಸ್​ಸಿ ಓದಿದ್ದರು. ಅವರ ಎರಡನೇ ಪತ್ನಿ ಶೈಲಜಾ ಬಿಎಸ್​ಸಿ ಓದಿದ್ದರು. ದ್ವಾರಕೀಶ್​ಗೆ ಒಟ್ಟೂ ಆರು ಜನ ಗಂಡು ಮಕ್ಕಳು. ಮೊದಲ ಪತ್ನಿ ಅಂಬುಜಮ್ಮನಿಗೆ 5 ಜನ ಗಂಡು ಮಕ್ಕಳು. ಎರಡನೇ ಹೆಂಡತಿ ಶೈಲಜಾಗೆ ಒಂದು ಗಂಡು ಮಗು.

‘ಎರಡನೇ ಮದುವೆ ಆಗಬಾರದಿತ್ತು’; ನಿರ್ಧಾರದ ಬಗ್ಗೆ ಮರುಗಿದ್ದ ದ್ವಾರಕೀಶ್
ದ್ವಾರಕೀಶ್-ಅಂಬುಜಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 16, 2024 | 3:29 PM

ನಟ ದ್ವಾರಕೀಶ್ (Dwarakish) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಅವರು ಇಂದು (ಏಪ್ರಿಲ್ 16) ನಿಧನ ಹೊಂದಿದ್ದಾರೆ. ದ್ವಾರಕೀಶ್ ಅವರು ಸಾಕಷ್ಟು ವಿಚಾರಗಳಿಗೆ ಸುದ್ದಿ ಆಗಿದ್ದರು. ಅವರು ಸಿನಿಮಾ ನಿರ್ಮಾಣ ಮಾಡಿ, ನಿರ್ದೇಶಕರಾಗಿ, ನಟನಾಗಿ ಫೇಮಸ್ ಆಗಿದ್ದರು. ಆರಂಭದಲ್ಲಿ ದೊಡ್ಡ ಗೆಲುವು ಕಂಡಿದ್ದ ಅವರು ನಂತರ ಸಾಲು ಸಾಲು ಫ್ಲಾಪ್ ಕೊಟ್ಟರು. ದ್ವಾರಕೀಶ್ ಅವರು ಎರಡು ಮದುವೆ ಆಗಿದ್ದರು. ಎರಡನೇ ಮದುವೆ ಆಗಿದ್ದಕ್ಕೆ ಅವರಿಗೆ ಪಶ್ವಾತಾಪ ಇತ್ತು. ಈ ಬಗ್ಗೆ ಅವರು ಮರುಗಿದ್ದರು.

ಮೊದಲ ಪತ್ನಿ ಅಂಬುಜಾ ಅವರು ದ್ವಾರಕೀಶ್ ದೂರದ ಸಂಬಂಧಿ. ಚಿತ್ರದುರ್ಗ ಅವರ ಊರಾಗಿತ್ತು. ಅಂಬುಜನಾ ಪ್ರೀತಿಸುತ್ತಿದ್ದರು ದ್ವಾರಕೀಶ್. ಇದನ್ನು ಪತ್ರದ ಮೂಲಕ ಹೇಳಿಕೊಂಡಿದ್ದರು. ದ್ವಾರಕೀಶ್ ಪ್ರೀತಿಯನ್ನು ಅವರು ಒಪ್ಪಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅಂಬುಜಾ ಬಳಿ ಹೇಳಿಕೊಂಡಿದ್ದರು ದ್ವಾರಕೀಶ್. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅಂಬುಜಾ. ಮದುವೆ ಆದ ಬಳಿಕ ದ್ವಾರಕೀಶ್ ಅವರ ಸಣ್ಣ ಸಣ್ಣ ಆಸೆಯನ್ನೂ ಅಂಬುಜಾ ಈಡೇರಿಸುತ್ತಿದ್ದರಂತೆ. ದಯಾನಂದ ಕಾಲೇಜಿನಲ್ಲಿ ಅಂಬುಜಾ ಪ್ರೊಫೆಸರ್ ಆಗಿದ್ದರು. 62 ವರ್ಷ ಇವರು ಸಂಸಾರ ನಡೆಸಿದ್ದರು.

ಎರಡನೇ ಮದುವೆ ಆಗುವ ನಿರ್ಧಾರ ತೆಗೆದುಕೊಂಡಾಗ ಅಂಬುಜನಿಗೆ ಸಾಕಷ್ಟು ಬೇಸರ ಆಗಿತ್ತಂತೆ. ‘ನಿನ್ನಿಷ್ಟವೇ ನನ್ನಿಷ್ಟ’ ಎಂದಿದ್ದರು ಅಂಬುಜಾ. ‘ಅವಳಿಗೆ ನೋವು ಮಾಡಬಾರದಿತ್ತು’ ಎಂದು ದ್ವಾರಕೀಶ್​ ಬಿ ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮರುಗಿದ್ದರು. ಅಂಬುಜಾ ಎಂಎಸ್​ಸಿ ಓದಿದ್ದರೆ, ಶೈಲಜಾ ಬಿಎಸ್​ಸಿ ಓದಿದ್ದರು. ದ್ವಾರಕೀಶ್​ಗೆ ಆರು ಜನ ಗಂಡು ಮಕ್ಕಳು. ಮೊದಲ ಪತ್ನಿ ಅಂಬುಜಮ್ಮನಿಗೆ 5 ಜನ ಗಂಡು ಮಕ್ಕಳಿದ್ದರು. ಎರಡನೇ ಹೆಂಡತಿ ಶೈಲಜಾಗೆ ಒಂದು ಗಂಡು ಮಗು.

ಇದನ್ನೂ ಓದಿ: ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್; ಬೆಂಗಳೂರಿನ ಹೊರ ವಲಯದಲ್ಲಿ ವಾಸವಾಗಿದ್ದರು

ದ್ವಾರಕೀಶ್ ಅವರಿಗೆ ಹೃದಯಾಘಾತ ಆಗಿದೆ. ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಿವಾಸದಲ್ಲಿ ಅವರ ಮೃತದೇಹವನ್ನು ಇಡಲಾಗಿದೆ. ಚಿತ್ರರಂಗದ ಅನೇಕರು ಬಂದು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಏಪ್ರಿಲ್ 17ರ ಮಧ್ಯಾಹ್ನ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ