Dwarakish: ‘ದ್ವಾರಕೀಶ್​ ನಿಧನದಿಂದ ತೀವ್ರ ನೋವಾಗಿದೆ’: ಕಂಬನಿ ಮಿಡಿದ ರಜನಿಕಾಂತ್​

ಸ್ಟಾರ್​ ನಟ ರಜನಿಕಾಂತ್​ ಮತ್ತು ದ್ವಾರಕೀಶ್​ ಅವರ ನಡುವೆ ಉತ್ತಮ ಒಡನಾಟ ಇತ್ತು. ರಜನಿಕಾಂತ್​ ಅಭಿನಯಿಸಿದ್ದ ‘ಅಡುತ ವಾರಿಸು’ ಚಿತ್ರಕ್ಕೆ ದ್ವಾರಕೀಶ್​ ಬಂಡವಾಳ ಹೂಡಿದ್ದರು. 1983ರಲ್ಲಿ ಆ ಸಿನಿಮಾ ಬಿಡುಗಡೆ ಆಗಿತ್ತು. ಇಂದು (ಏ.16) ಅಗಲಿದ ತಮ್ಮ ಗೆಳೆಯನಿಗೆ ರಜನಿಕಾಂತ್​ ಸಂತಾಪ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Dwarakish: ‘ದ್ವಾರಕೀಶ್​ ನಿಧನದಿಂದ ತೀವ್ರ ನೋವಾಗಿದೆ’: ಕಂಬನಿ ಮಿಡಿದ ರಜನಿಕಾಂತ್​
ರಜನಿಕಾಂತ್​, ದ್ವಾರಕೀಶ್​
Follow us
ಮದನ್​ ಕುಮಾರ್​
|

Updated on: Apr 16, 2024 | 4:13 PM

ಖ್ಯಾತ ನಟ ದ್ವಾರಕೀಶ್​ ಅವರ ನಿಧನಕ್ಕೆ (Dwarakish Death) ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯಲ್ಲೂ ದ್ವಾರಕೀಶ್​ ಅವರು ಕೆಲಸ ಮಾಡಿದ್ದರು. ನಿರ್ಮಾಪಕನಾಗಿ ಅವರು ಸಾಕಷ್ಟು ಖ್ಯಾತಿ ಹೊಂದಿದ್ದರು. ಸೂಪರ್​ ಸ್ಟಾರ್​ ರಜನಿಕಾಂತ್​ ಜೊತೆಗೂ ದ್ವಾರಕೀಶ್​ (Dwarakish) ಅವರು ಸಿನಿಮಾ ಮಾಡಿದ್ದರು. ಇಂದು (ಏಪ್ರಿಲ್​ 16) ದ್ವಾರಕೀಶ್​ ನಿಧನಕ್ಕೆ ರಜನಿಕಾಂತ್​ (Rajinikanth) ಸಂತಾಪ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಗಲಿದ ಗೆಳೆಯನ ಆತ್ಮಕ್ಕೆ ರಜನಿಕಾಂತ್​ ಶಾಂತಿಕೋರಿದ್ದಾರೆ.

‘ನನ್ನ ಆತ್ಮೀಯ ಗೆಳೆಯ ದ್ವಾರಕೀಶ್​ ನಿಧನದಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದು ನಿಂತರು. ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ರಜನಿಕಾಂತ್​ ಅವರು ‘ಎಕ್ಸ್​’ (ಟ್ವಿಟರ್​) ಮೂಲಕ ಬರೆದುಕೊಂಡಿದ್ದಾರೆ.

ರಜನಿಕಾಂತ್​ ‘ಎಕ್ಸ್​’ (ಟ್ವಿಟರ್​) ಪೋಸ್ಟ್​:

ರಜನಿಕಾಂತ್​ ಮತ್ತು ದ್ವಾರಕೀಶ್​ ನಡುವೆ ಒಳ್ಳೆಯ ಒಡನಾಟ ಇತ್ತು. ರಜನಿ ನಟಿಸಿದ್ದ ‘ಅಡುತ ವಾರಿಸು’ ಸಿನಿಮಾವನ್ನು ದ್ವಾರಕೀಶ್​ ಅವರು ನಿರ್ಮಾಣ ಮಾಡಿದ್ದರು. ಆ ಸಿನಿಮಾ 1983ರಲ್ಲಿ ಬಿಡುಗಡೆ ಆಗಿತ್ತು. ಶ್ರೀದೇವಿ ಕೂಡ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ತಮ್ಮ ಗೆಳೆಯನ ಅಗಲಿಕೆಗೆ ರಜನಿಕಾಂತ್​ ಅವರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಅನೇಕ ನಟ-ನಟಿಯರು, ತಂತ್ರಜ್ಞರು ದ್ವಾರಕೀಶ್​ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರಿಗೆ 2 ಸಿನಿಮಾ ಮಾತ್ರ ನಿರ್ಮಿಸಿದ ದ್ವಾರಕೀಶ್; ವಿಷ್ಣು ಜತೆ ಹಲವು ಚಿತ್ರ ಮಾಡಿದ್ದೇಕೆ?

ಬುಧವಾರ (ಏಪ್ರಿಲ್​ 17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ದ್ವಾರಕೀಶ್​ ಅವರ ಪಾರ್ಥಿವ ಶರೀರ ಇಡಲಾಗುವುದು. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂಬ ಮಾಹಿತಿ ಇದೆ. ‘ದ್ವಾರಕೀಶ್​ ಚಿತ್ರ’ ಸಂಸ್ಥೆಯ ಮೂಲಕ 50ಕ್ಕೂ ಅಧಿಕ ಸಿನಿಮಾಗಳನ್ನು ದ್ವಾರಕೀಶ್​ ಅವರು ನಿರ್ಮಾಣ ಮಾಡಿದ್ದರು. ಆ ಮೂಲಕ ಅನೇಕರಿಗೆ ಅವಕಾಶ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.