ಅಣ್ಣಾವ್ರಿಗೆ 2 ಸಿನಿಮಾ ಮಾತ್ರ ನಿರ್ಮಿಸಿದ ದ್ವಾರಕೀಶ್; ವಿಷ್ಣು ಜತೆ ಹಲವು ಚಿತ್ರ ಮಾಡಿದ್ದೇಕೆ?

ನಿರ್ಮಾಪಕನಾಗಿ ದ್ವಾರಕೀಶ್​ ಅವರು ಸ್ಯಾಂಡಲ್​ವುಡ್​ನಲ್ಲಿ ಯಶಸ್ಸು ಕಂಡಿದ್ದರು. ವಿಷ್ಣುವರ್ಧನ್​ ಜೊತೆ ಅವರು ಹಲವು ಸಿನಿಮಾ ಮಾಡಿದ್ದರು. ‘ವಿಷ್ಣು ಒಳ್ಳೆಯ ನಟ. ನಾನು ಒಳ್ಳೆಯ ನಿರ್ಮಾಪಕ. ಅವನಿಗೆ ಒಳ್ಳೆಯ ನಿರ್ಮಾಪಕ ಬೇಕಿತ್ತು. ನನಗೆ ಒಳ್ಳೆಯ ನಟ ಬೇಕಿತ್ತು. ಅದೇ ನಮ್ಮ ಒಟನಾಡಕ್ಕೆ ಕಾರಣ’ ಎಂದು ದ್ವಾರಕೀಶ್​ ಹೇಳಿದ್ದರು. ಬಿ. ಗಣಪತಿ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದರು.

ಅಣ್ಣಾವ್ರಿಗೆ 2 ಸಿನಿಮಾ ಮಾತ್ರ ನಿರ್ಮಿಸಿದ ದ್ವಾರಕೀಶ್; ವಿಷ್ಣು ಜತೆ ಹಲವು ಚಿತ್ರ ಮಾಡಿದ್ದೇಕೆ?
ಡಾ. ರಾಜ್​ಕುಮಾರ್​, ದ್ವಾರಕೀಶ್​, ವಿಷ್ಣುವರ್ಧನ್
Follow us
|

Updated on: Apr 16, 2024 | 3:38 PM

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಅವರ ನಿಧನಕ್ಕೆ (Dwarakish Death) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಚಿತ್ರರಂಗಕ್ಕೆ ದ್ವಾರಕೀಶ್​ ನೀಡಿದ ಕೊಡುಗೆಯನ್ನು ಸ್ವರಿಸಿಕೊಳ್ಳಲಾಗುತ್ತಿದೆ. ಬಹುತೇಕ ಎಲ್ಲ ಸ್ಟಾರ್​ ಕಲಾವಿದರ ಜೊತೆ ದ್ವಾರಕೀಶ್​ (Dwarakish) ಅವರು ಒಡನಾಟ ಹೊಂದಿದ್ದರು. ನಟ ರಾಜ್​ಕುಮಾರ್​ ಜೊತೆಗೂ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್​ ನಟಿಸಿದ್ದರು. ಆದರೆ ದ್ವಾರಕೀಶ್​ ನಿರ್ಮಾಣದ ಎರಡು ಸಿನಿಮಾಗಳಲ್ಲಿ ಮಾತ್ರ ರಾಜ್​ಕುಮಾರ್​ (Dr Rajkumar) ನಟಿಸಿದರು. ಆ ಬಳಿಕ ಅವರು ವಿಷ್ಣುವರ್ಧನ್​ ಜೊತೆಗೆ ಹೆಚ್ಚು ಸಿನಿಮಾಗಳನ್ನು ಮಾಡಲು ಆರಂಭಿಸಿದರು.

ಡಾ. ರಾಜ್​ಕುಮಾರ್ ಅವರ ಕಾಲ್​ಶೀಟ್​ ಸಿಗುವುದು ಎಂದರೆ ಸುಲಭದ ಮಾತಲ್ಲ. 1960ರ ದಶಕದಲ್ಲಿ ಅವರು ಅಷ್ಟು ಬ್ಯುಸಿ ಆಗಿದ್ದರು. ದ್ವಾರಕೀಶ್​ ಅವರು ಆಗತಾನೇ ನಿರ್ಮಾಪಕನಾಗಿದ್ದರು. ದ್ವಾರಕೀಶ್ ಆಗಿನ್ನೂ 25-26ರ ಪ್ರಾಯದ ಯುವಕ. ಅದಾಗಲೇ ರಾಜ್​ಕುಮಾರ್​ ಜೊತೆ ನಟಿಸಿ ಫೇಮಸ್​ ಆಗಿದ್ದರು ಅವರು ನಿರ್ಮಾಪಕನಾಗಿ ಡೇಟ್ಸ್​ ಪಡೆಯುವುದು ಸಲಭ ಆಗಿರಲಿಲ್ಲ. ಹೇಗೋ ಡೇಟ್ಸ್​ ಪಡೆದ ಅವರು ‘ಮೇಯರ್​ ಮುತ್ತಣ್ಣ’ ಸಿನಿಮಾ ಮಾಡಿ ಯಶಸ್ಸು ಕಂಡರು.

ಇದನ್ನೂ ಓದಿ: ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್; ಬೆಂಗಳೂರಿನ ಹೊರ ವಲಯದಲ್ಲಿ ವಾಸವಾಗಿದ್ದರು

ಬಳಿಕ ದ್ವಾರಕೀಶ್​ ಅವರು ಡಾ. ರಾಜ್​ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿದರು. ಅದಾದ ಬಳಿಕ ಮತ್ತೆ ಡಾ. ರಾಜ್​ಕುಮಾರ್​ ಸಿನಿಮಾಗಳಿಗೆ ದ್ವಾರಕೀಶ್​ ಬಂಡವಾಳ ಹೂಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್​ಕುಮಾರ್​ ಅವರು ತಮ್ಮದೇ ‘ವಜ್ರೇಶ್ವರಿ ಕಂಬೈನ್ಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ರಾಜ್​ಕುಮಾರ್​ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್​’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್​ ಅವರಿಗಾಗಲಿ ಅಥವಾ ಬೇರೆ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್​ಶೀಟ್​ ಸಿಗದಾಯಿತು.

1970ರ ದಶಕದಲ್ಲಿ ವಿಷ್ಣುವರ್ಧನ್​ ಸ್ಟಾರ್​ ನಟನಾದರು. ವಿಷ್ಣುವರ್ಧನ್​ ಮತ್ತು ದ್ವಾರಕೀಶ್​ ಅವರು ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಅವರಿಬ್ಬರು ಏಕವಚನದಲ್ಲಿ ಮಾತನಾಡಿಕೊಳ್ಳುವಷ್ಟು ಆಪ್ತರಾದರು. ನಿರ್ಮಾಪಕನಾಗಿ ಸಕ್ರಿಯರಾಗಿದ್ದ ದ್ವಾರಕೀಶ್​ ಅವರಿಗೆ ಈ ರೀತಿಯ ಸ್ಟಾರ್​ ಕಲಾವಿದರ ಕಾಲ್​ಶೀಟ್​ ಅಗತ್ಯವಾಗಿತ್ತು. ಅತ್ತ ಡಾ. ರಾಜ್​ಕುಮಾರ್​ ಅವರ ಡೇಟ್ಸ್​ ಸಿಗದಿದ್ದಾಗ, ಇತ್ತ ದ್ವಾರಕೀಶ್​ ಅವರಿಗೆ ವಿಷ್ಣು ಅವರ ಕಾಲ್​ಶೀಟ್​ ಸುಲಭದಲ್ಲಿ ಸಿಗುವಂತಾಯಿತು. ಹಾಗಾಗಿ ಅವರು ವಿಷ್ಣುಗಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ